ಕಡಬ: ರೋಟರಿ ಕ್ಲಬ್ ವತಿಯಿಂದ ಪೋಲಿಯೋ ಲಸಿಕಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ, ಫೆ. 02. ರೋಟರಿ ಕ್ಲಬ್ ವತಿಯಿಂದ ಪಲ್ಸ್ ಪೋಲಿಯೊ ಲಸಿಕೆ ಕಾರ್ಯಕ್ರಮವು ಜ.31ರಂದು ನಡೆಯಿತು. ಕಾರ್ಯಕ್ರಮವನ್ನು ಕಡಬ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಸುಚಿತ್ರ ರಾವ್ ಅವರು ಮಗುವಿಗೆ ಪೋಲಿಯೋ ಲಸಿಕೆ ನೀಡುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಕ್ಲಬ್ ಅಧ್ಯಕ್ಷ ವಿ.ಎಂ.ಕುರಿಯನ್, ಕಾರ್ಯದರ್ಶಿ ಇ.ಕೆ.ತೋಮಸ್, ಐ.ಪಿ.ಪಿ.ಅಚ್ಚುತ ಪ್ರಭು, ರೊಟೇರಿಯನ್ ಮಹಮ್ಮದ್ ರಫೀಕ್, ಸಿ.ಪಿ.ಸೈಮನ್, ಚಂದ್ರಶೇಖರ ಕೋಡಿಬೈಲು, ಗ್ರೇಸಿ ತೋಮಸ್ ಹಾಗೂ ಆಸ್ಪತ್ರೆಯ ಶುಶ್ರೂಷಕಿಯರು ಮತ್ತು ಆಶಾ ಕಾರ್ಯಕರ್ತೆಯರು ಮೊದಲಾದವರು ಉಪಸ್ಥಿತರಿದ್ದರು. ಒಟ್ಟು 629 ಮಕ್ಕಳು ಪೋಲಿಯೊ ಲಸಿಕೆ ಪಡೆದುಕೊಂಡರು.

Also Read  ಕಡಬ ಅಕ್ರಮ ಗೋ ಸಾಗಟದ ಪಿಕಪ್ ಚೆಕ್ ಪೋಸ್ಟ್ ಗೆ ಢಿಕ್ಕಿ ➤ ಆರೋಪಿ ವಶಕ್ಕೆ

error: Content is protected !!
Scroll to Top