(ನ್ಯೂಸ್ ಕಡಬ) newskadaba.com ರಾಮನಗರ, ಫೆ. 02. ಹಸುವಿನ ಮೈತೊಳೆಯಲೆಂದು ಹೋಗಿದ್ದ ಬಾಲಕ ಹಾಗೂ ಅವನನ್ನು ಕಾಪಾಡಲು ಹೋದ ಮಹಿಳೆಯೋರ್ವರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕನಕಪುರದ ಹುಣಸೆಮರದದೊಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೀಪು(11) ಹಾಗೂ ಆತನ ಸಂಬಂಧಿ ಮಹಿಳೆ ಭಾರತಿ(30) ಎಂದು ಗುರುತಿಸಲಾಗಿದೆ. ದೀಪು ಎಂಬಾತ ಜಮೀನಿನಲ್ಲಿದ್ದ ಹೊಂಡದಲ್ಲಿ ಹಸುವನ್ನು ತೊಳೆಯಲೆಂದು ಹೋಗಿದ್ದ ವೇಳೆ ಬಾಲಕ ಕಾಲು ಜಾರಿ ನೀರು ಪಾಲಾಗುವುದನ್ನು ಕಂಡ ಭಾರತಿ ಬಾಲಕನನ್ನು ರಕ್ಷಿಸಲೆಂದು ಹೋಗಿ ಇಬ್ಬರೂ ಕೆಸರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಹೊಂಡದ ಕೆಸರಿನಲ್ಲಿ ಮುಳುಗುತ್ತಿದ್ದ ಇಬ್ಬರನ್ನು ಊರವರು ರಕ್ಷಿಸಲು ಮುಂದಾದರಾದರು ಪ್ರಯೋಜನವಾಗಲಿಲ್ಲ.