ಮಂಗಳೂರು: ಮಹಾನಗರ ಪಾಲಿಕೆ ಅಧಿಕಾರಿಯ ಮನೆ ಹಾಗೂ ಕಛೇರಿ ಮೇಲೆ ಎಸಿಬಿ ದಾಳಿ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ.‌ 02. ಅಕ್ರಮ ಆಸ್ತಿ ಗಳಿಕೆ ಆರೋಪದಲ್ಲಿ ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಜಂಟಿ ನಿರ್ದೇಶಕ ಜಯರಾಜ್ ಎಂಬವರ ಮನೆ ಹಾಗೂ ಕಛೇರಿ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಇವರು ಕಳೆದ ಆರು ವರ್ಷಗಳಿಂದ ಮಹಾನಗರ ಪಾಲಿಕೆಯಲ್ಲಿ ಕರ್ತವ್ಯದಲ್ಲಿದ್ದು, ಜಯರಾಜ್ ಅವರ ಕಾಪಿಕಾಡ್ ಎಂಬಲ್ಲಿರುವ ಮನೆಗೆ ಹಾಗೂ ಕಛೇರಿಗೆ ದಾಳಿ ನಡೆಸಿದ್ದಾರೆ. ಇವರ ಪತ್ನಿ ಕೊಚ್ಚಿಯ ಕೇಂದ್ರಾಡಳಿತ ಪ್ರದೇಶವಾದ ಮಾಹೆಯಲ್ಲಿ ಕೇಂದ್ರ ಸರಕಾರಿ ಇಲಾಖೆಯ ವೈದ್ಯೆಯಾಗಿದ್ದು, ಅಲ್ಲಿ ಅವರು ವಾಸವಾಗಿರುವ ಕ್ವಾಟ್ರಸ್ ಮೇಲೂ ದಾಳಿ ನಡೆಸಲಾಗಿದೆ. ಇವರು ಮಂಗಳೂರು ಹಾಗೂ ಕೇರಳದಲ್ಲಿ ಆಸ್ತಿ ಹೊಂದಿದ್ದಾರೆ ಎನ್ನಲಾಗಿದೆ.

Also Read  ಹಿಟ್ ಆ್ಯಂಡ್ ರನ್ ಪ್ರಕರಣ ➤  ಆರೋಪಿ ಟೆಕ್ಕಿ ಬಂಧನ

error: Content is protected !!
Scroll to Top