ಕಡಬ: ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎನ್.ಕೇಶವ ಭಟ್ ನಿಡುಗಳ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ಫೆ. 01. ಫೆ.24 ರಂದು ಸುಬ್ರಹ್ಮಣ್ಯದಲ್ಲಿ ನಡೆಯಲಿರುವ ಎರಡನೇ ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಎನ್. ಕೇಶವ ಭಟ್ ನಿಡುಗಳ್ ಅವರು ಆಯ್ಕೆಯಾಗಿದ್ದಾರೆ.


ಸುಬ್ರಹ್ಮಣ್ಯ ಕಾಲೇಜಿನಲ್ಲಿ ನಡೆದ ಸಾಹಿತ್ಯ ಸಮ್ಮೆಳನದ ಸ್ವಾಗತ ಸಮಿತಿ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ಸುಬ್ರಹ್ಮಣ್ಯದ ಎಸ್.ಎಸ್.ಪಿ ಯು ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದ ಇವರು 31 ವರ್ಷಗಳ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಮೂಲತಃ ಇವರು ಕಾಸರಗೋಡು ನಿರ್ಚಾಲು ನಿಡುಗಳ್ ನವರಾಗಿದ್ದು, ಪ್ರಸ್ತುತ ಸುಬ್ರಹ್ಮಣ್ಯದ ಅಗ್ರಹಾರದ ನಿವಾಸಿ. ಸಾಹಿತ್ಯ ಆಸಕ್ತರಾಗಿರುವ ಇವರು ಕನ್ನಡ ವಿದ್ವಾಂಸರಾಗಿದ್ದಾರೆ.

Scroll to Top