ಮಂಗಳೂರು: ಹೋಟೆಲ್ ನಲ್ಲಿ ಯುವತಿಗೆ ಚೂರಿ ಇರಿತ ಪ್ರಕರಣ ➤ ಮೂವರ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 01. ಇಲ್ಲಿನ ಹೋಟೆಲೊಂದರಲ್ಲಿ ಯುವತಿ ಹಾಗೂ ಆಕೆಯ ಪ್ರಿಯಕರನ ಮೇಲೆ ನಡೆದ ದಾಳಿಗೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಬೊಕ್ಕಪಟ್ಟಣದ ತ್ರಿಶೂಲ್ ಸಾಲಿಯಾನ್, ಕೋಡಿಕಲ್ ನ ಸಂತೋಷ್ ಪೂಜಾರಿ ಹಾಗೂ ಅಶೋಕ್ ನಗರದ ದ್ಯಾನೇಶ್ ಎಂದು ಗುರುತಿಸಲಾಗಿದೆ. ಇಲ್ಲಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ ಯುವತಿ ಮತ್ತು ಆರೋಪಿ ತ್ರಿಶೂಲ್ ನಡುವೆ ಫೇಸ್ ಬುಕ್ ಮೂಲಕ ಪರಿಚಯವಾಗಿ ಬಳಿಕ ಪ್ರೇಮಕ್ಕೆ ತಿರುಗಿದ ನಂತರ ವೈಮನಸ್ಸಿನಿಂದಾಗಿ ಆತನಿಂದ ದೂರವಾಗಲು ನಿರ್ಧರಿಸಿದ್ದಾಳೆ. ಹೀಗಾಗಿ ಆತ ನೀಡಿದ್ದ ಗಿಫ್ಟ್ ಗಳನ್ನು ಹಿಂತಿರುಗಿಸಲು ಬಂಟ್ಸ್ ಹಾಸ್ಟೆಲ್ ಹತ್ರ ಬರುವಂತೆ ಯುವತಿ ಹೇಳಿದ್ದು, ಈ ಸಂದರ್ಬದಲ್ಲೂ ಆಕೆಯ ಮೇಲೆ ದಾಳಿಗೆ ಯತ್ನಿಸಿದ್ದ. ಇದಾದ ಬಳಿಕ ಆಕೆಯ ಮೇಲೆ ದ್ವೇಷ ಸಾಧಿಸಿದ್ದ ತ್ರಿಶೂಲ್, ಜ. 30ರಂದು ಹೋಟೆಲ್ ನಲ್ಲಿ ಯುವತಿಯು ಸ್ನೇಹಿತರೊಂದಿಗೆ ಆಗಮಿಸಿ ಬರ್ತ್ ಡೇ ಪಾರ್ಟಿ ನಡೆಸುತ್ತಿದ್ದ ವೇಳೆ ಸ್ನೇಹಿತರೊಂದಿಗೆ ಆಗಮಿಸಿದ್ದ ಈತ ದಾಳಿಗೆ ಯತ್ನಿಸಿದ್ದಾನೆ. ಈ ಸಂದರ್ಭ ಜೊತೆಗಿದ್ದ ಸ್ನೇಹಿತರು ಆಕೆಯನ್ನು ಕಾಪಾಡಲೆಂದು ಧಾವಿಸಿದ್ದು, ಈ ಸಂದರ್ಭ ಓರ್ವ ಸ್ನೇಹಿತ ಕೂಡಾ ಚೂರಿ ಇರಿತಕ್ಕೊಳಗಾಗಿದ್ದಾನೆ. ಈ ಕುರಿತು ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Also Read   ಒಂದು ಅಂಕ ಹೆಚ್ಚು ಬಂದರೂ ಮರುಮೌಲ್ಯಮಾಪನಕ್ಕೆ ಪರಿಗಣಿಸಲಾಗುವುದು ➤ಸಚಿವ ಬಿಸಿ.ನಾಗೇಶ್ 

error: Content is protected !!
Scroll to Top