ಮಂಗಳೂರು: ಭಜನಾ ಮಂದಿರದಲ್ಲಿ ಮಲ-ಮೂತ್ರ ವಿಸರ್ಜನೆ ಆರೋಪ ➤ ಇಬ್ಬರು ಅರೆಸ್ಟ್

(ನ್ಯೂಸ್ ಕಡಬ) newskadaba.com ಮಂಗಳೂರು, ಫೆ. 01. ಕೊಣಾಜೆ ಬಳಿಯ ಗೋಪಾಕೃಷ್ಣ ಭಜನಾ ಮಂದಿರದಲ್ಲಿ ಮಲಮೂತ್ರ ಮಾಡಿ ಅಪವಿತ್ರಗೊಳಿಸಿದ ಕೃತ್ಯಕ್ಕೆ ಸಂಬಂಧಿಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ.

ಬಂಧಿತ ಆರೋಪಿಗಳನ್ನು ತಲಪಾಡಿಯ ಕೊಮರಂಗಳ ನಿವಾಸಿ ಮಹಮ್ಮದ್ ಸುಹೈಲ್(19) ಹಾಗೂ ತಲಪಾಡಿಯ ಪಿಲಿಕೂರು ನಿವಾಸಿ ನಿಜಾಮುದ್ದೀನ್(21) ಎಂದು ಗುರುತಿಸಲಾಗಿದೆ. ಪೋಲಿಸರು ವಿವಿಧ ಕಡೆಯ ಸಿಸಿಟಿವಿ ಫೂಟೇಜ್ ಮೂಲಕ ಇವರನ್ನು ಬೆನ್ನತ್ತಿ ಹೋದ ಸಂದರ್ಭ ಸಿಕ್ಕಿಬಿದ್ದಿದ್ದಾರೆ. ಭಜನಾ ಮಂದಿರಕ್ಕೆ ಕಾಣಿಕೆ ಹುಂಡಿಯಿಂದ ಹಣ ಕಳ್ಳತನಕ್ಕೆಂದು ನುಗ್ಗಿದ್ದು, ಅಲ್ಲಿ ಯಾವುದೇ ರೀತಿಯ ಹಣವಾಗಲೀ, ಬೆಲೆಬಾಳುವ ವಸ್ತುಗಳಾಗಲಿ ಸಿಗದೇ ಇದ್ದಾಗ ಕಾಣಿಕೆ ಡಬ್ಬಿ ಒಡೆದ ಕೃತ್ಯ ಬೇರೆ ಯಾರೋ ನಡೆಸಿದ್ದಾರೆ ಎನ್ನುವ ಹಾಗೆ ಬಿಂಬಿಸಲು ಈ ರೀತ ಮಲಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯ ವೇಳೆ ತಿಳಿದುಬಂದಿದೆ.

Also Read  ಟಾಪರ್ ಅನುಷ್ ಎ. ಎಲ್ ಗೆ ಸನ್ಮಾನ ➤ ಸುಬ್ರಹ್ಮಣ್ಯ ಯೇನೆಕಲ್ಲು ಒಕ್ಕೂಟ ವತಿಯಿಂದ ಸನ್ಮಾನ

error: Content is protected !!
Scroll to Top