ವಿಟ್ಲ: ಕೊಕ್ಕೊ ಗಿಡ ಕಡಿದ ವಿಚಾರ -ಮಹಿಳೆಗೆ ಹಲ್ಲೆ

(ನ್ಯೂಸ್ ಕಡಬ) newskadaba.com ವಿಟ್ಲ, ಫೆ. 01. ಕೊಕ್ಕೊ ಗಿಡ ಕಡಿದ ವಿಚಾರವಾಗಿ ವ್ಯಕ್ತಿಯೊಬ್ಬ ಮಹಿಳೆಯೊಬ್ಬರ ಮೇಲೆ ಮಾನಭಂಗಕ್ಕೆ ಯತ್ನಿಸಿ, ಬಳಿಕ ಹಲ್ಲೆ ನಡೆಸಿದ ಘಟನೆ ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ನಡೆದಿದೆ.

ಕನ್ಯಾನ ಗ್ರಾಮದ ಪಂಜಾಜೆ ಎಂಬಲ್ಲಿ ಮಹಿಳೆಯೋರ್ವರ ಮನೆ ಬಳಿ ಇರುವ ಕೋ ಕೋ ಗಿಡವನ್ನು ಆರೋಪಿ ಜಯರಾಮ ಎಂಬಾತ ಕಡಿಯುತ್ತಿರುವಾಗ ಮಹಿಳೆ ನೀನು ಕೋ ಕೋ ಗಿಡವನ್ನು ಯಾಕೆ ಕಡಿಯುತ್ತಿ ಎಂದು ಕೇಳಿದಾಗ ಆರೋಪಿ ಅವಾಚ್ಯ ಶಬ್ದಗಳಿಂದ ನಿಂದಿಸಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಹೇಳಿ ಕೈಯಲ್ಲಿದ್ದ ಕತ್ತಿಯನ್ನು ಮಹಿಳೆ ಕಡೆಗೆ ಬೀಸಿದಾಗ ತಪ್ಪಿಸಿಕೊಳ್ಳಲು ಮುಂದಾದಾಗ ಮಹಿಳೆಯು ಬದಿಯಲ್ಲಿದ್ದ ಚರಂಡಿಗೆ ಬಿದ್ದು ಮಹಿಳೆಯ ಸೊಂಟ, ತಲೆ ಹಾಗೂ ಮೈ ಕೈಗೆ ಗುದ್ದಿದ ಗಾಯವಾಗಿದೆ. ಬಳಿಕ ನೆಲದಿಂದ ಏಳುವಾಗ ಆರೋಪಿಯು ಮಹಿಳೆಯ ಕೆನ್ನೆಗೆ ಹೊಡೆದು ದೂಡಿ ಹಾಕಿ ಎಳೆದು ಮಾನಭಂಗಕ್ಕೆ ಪ್ರಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಈ ಕುರಿತು ವಿಟ್ಲ‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಕಡಬದ ನೂತನ ಇಲೆಕ್ಟ್ರಾನಿಕ್ಸ್ ಮಳಿಗೆ - ಸಂಗೀತಾ ಇಲೆಕ್ಟ್ರಾನಿಕ್ಸ್

error: Content is protected !!
Scroll to Top