ಬಂಟ್ವಾಳ: ಮನೆಗೆ ನುಗ್ಗಿ ಚಿನ್ನಾಭರಣ ಕಳವು

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 31. ಮನೆಯೊಂದಕ್ಕೆ ನುಗ್ಗಿದ ಕಳ್ಳರು ಚಿನ್ನಾಭರಣ ಕಳವುಗೈದ ಘಟನೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಮಣಿನಾಲ್ಕೂರು ಗ್ರಾಮದ ನೇಲ್ಯಪಲ್ಕೆ ಎಂಬಲ್ಲಿ ನಡೆದಿದೆ.

ನೇಲ್ಯಪಲ್ಕೆ ನಿವಾಸಿ ಖಾದರ್ ಎಂಬವರ ಮನೆಯಿಂದ ಕಳ್ಳತನವಾಗಿದ್ದು, ಸುಮಾರು 22 ಪವನ್ ಚಿನ್ನಾಭರಣ ದೋಚಿದ್ದಾರೆ ಎನ್ನಲಾಗಿದೆ. ಈ ವೇಳೆ ಮನೆಯಲ್ಲಿದ್ದ ಸಿ.ಸಿ ಕ್ಯಾಮರಾ ಆಫ್ ಆಗಿದ್ದು, ಹಿಂಬಾಗಿಲನ್ನು ತೆಗೆಯಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದವರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

Also Read  ಗೃಹಲಕ್ಷ್ಮೀ, ಗೃಹಜ್ಯೋತಿ ಹೆಸರಿನಲ್ಲಿ ನಕಲಿ ಆಯಪ್ ಕಾರ್ಯಾಚರಣೆ- ಎಚ್ಚರವಹಿಸುವಂತೆ ಎಸ್.ಪಿ ಮನವಿ

error: Content is protected !!
Scroll to Top