COTPA-2003 ಕಾಯಿದೆ ಉಲ್ಲಂಘನೆ – ಜಿಲ್ಲಾ/ತಾಲೂಕು ತನಿಖಾದಳ ವತಿಯಿಂದ ಕಾರ್ಯಚರಣೆ*

(ನ್ಯೂಸ್ ಕಡಬ) newskadaba.com ಮಂಗಳೂರು, . 31. ಸಾರ್ವಜನಿಕ ಸ್ಥಳಗಳಲ್ಲಿ ಜಗಿಯುವ ತಂಬಾಕು ಹಾಗೂ ಪಾನ್ ಮಸಾಲ  ಉತ್ಪನ್ನಗಳನ್ನು ಜಗಿದು ಉಗಿಯುವುದರಿಂದ ಕೋವಿಡ್ 19 ಹಾಗೂ ಇತರೆ ಸಾಂಕ್ರಾಮಿಕ ರೋಗಗಳು ಇತರರಿಗೆ ಹರಡುವ ಸಾಧ್ಯತೆ ಹೆಚ್ಚು ಈ ಕಾರಣದಿಂದ ಜಿಲ್ಲಾ/ತಾಲೂಕು ತನಿಖಾದಳ  ಹಾಗೂ ಪೊಲೀಸ್ ಇಲಾಖೆಯ ತಂಡವು ಜನವರಿ 29 ಮತ್ತು 30 ರಂದು ಸಾರ್ವಜನಿಕ ಸ್ಥಳಗಳಲ್ಲಿ COTPA-2003 ಕಾಯಿದೆ  ಉಲ್ಲಂಘನೆಯ ವಿರುದ್ಧ ಪಣಂಬೂರ್/ಬೈಕಂಪಾಡಿ ಪ್ರದೇಶ ವ್ಯಾಪ್ತಿಯಲ್ಲಿ  ಕಾರ್ಯಚರಣೆ ನಡೆಸಲಾಯಿತು.


ಜನವರಿ 29 ರಂದು ಕಾರ್ಯಾಚರಣೆ ನಡೆಸಿ ಸೆಕ್ಷನ್ 4, 6 ಎ ಹಾಗೂ 6 ಬಿ ಪ್ರಕಾರ  15 ಪ್ರಕರಣ ದಾಖಲಿಸಿ ಸುಮಾರು ರೂ. 2,350 ದಂಡ ವಿಧಿಸಲಾಯಿತು. 30 ರಂದು ಸೆಕ್ಷನ್ 4, 6ಎ ಹಾಗೂ 6ಬಿ ಪ್ರಕಾರ  13 ಪ್ರಕರಣ ದಾಖಲಿಸಿ ಸುಮಾರು ರೂ.2,600 ದಂಡ ವಿಧಿಸಲಾಯಿತು ಹಾಗೂ ಕಾಯಿದೆ ಕುರಿತಂತೆ ಅಂಗಡಿ ಹಾಗೂ ಹೋಟೇಲ್ ಮಾಲಿಕರಿಗೆ ಮಾಹಿತಿ ನೀಡಲಾಯಿತು. ಈ ಸಂದರ್ಭದಲ್ಲಿ ತಾಲೂಕು ಆರೋಗ್ಯ ಅಧಿಕಾರಿ ಡಾ.ಸುಜಯ್ ಭಂಡಾರಿ, ಜಿಲ್ಲಾ ಸಲಹೆಗಾರ ಡಾ. ಹನುಮಂತರಾಯಪ್ಪ, ಆಪ್ತಸಮಾಲೋಚಕ ವಿಜಯ್ ನಾಯ್ಕ್, ಕಛೇರಿ ಸಹಾಯಕಿ ವಿದ್ಯಾ ಕುಮಾರಿ ಹಾಗೂ ಪಣಂಬೂರು ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶ್ರೀರಾಮ ಪ್ರಭು ಮತ್ತು ಬಸವರಾಜ್ ಉಪಸ್ಥಿತರಿದ್ದರು.

Also Read  ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಆಟಿದ ಕೂಟೊ ಲೇಸ್ - ಸನ್ಮಾನ

error: Content is protected !!
Scroll to Top