ಪ್ರಿಯಕರನ ಜೊತೆ ಓಡಿ ಹೋಗಲೆಂದು ಹೆತ್ತ ಮಗುವನ್ನೇ ಗೋಡೆಗೆ ಗುದ್ದಿ ಕೊಂದ ಕ್ರೂರಿ ತಾಯಿ..!

(ನ್ಯೂಸ್ ಕಡಬ) newskadaba.com ಚನ್ನರಾಯಪಟ್ಟಣ, ಜ. 31. ಪ್ರಿಯಕರನ ಜೊತೆ ಓಡಿ ಹೋಗುವ ನೆಪದಲ್ಲಿ ಪಾಪಿ ತಾಯಿಯೋರ್ವಳು ತನ್ನ ಹೆತ್ತ ಮಗುವನ್ನೇ ಕೊಂದ ಘಟನೆ ನಡೆದಿದೆ.

ಆರೋಪಿ ತಾಯಿ ಸುಮಾ ಎಂಬಾಕೆ ತನ್ನ ಎರಡು ವರ್ಷದ ಪುತ್ರ ತನ್ಮಯ್‌ ನನ್ನು ಕೊಲೆ ಮಾಡಿದ್ದಾಳೆ. ಈಕೆ ಪ್ರಿಯಕರನ ಜತೆ ಓಡಿ ಹೋಗುವ ಆಲೋಚನೆ ಮಾಡುತ್ತಿದ್ದ ವೇಳೆ ಮಗು ಜೋರಾಗಿ ಅಳುತ್ತಿದ್ದುದ್ದನ್ನು ಕಂಡು ಕೋಪಗೊಂಡು ಗೋಡೆಗೆ ಗುದ್ದಿ ಕೊಲೆ ಮಾಡಿದ್ದಾಳೆ. ಜ.19 ರಂದು ಘಟನೆ ನಡೆದಿದ್ದು ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಮಗುವಿನ ಸಾವಿನ ಕುರಿತು ಸಂಶಯಗೊಂಡ ಪತಿ ನಂಜಪ್ಪ ಮರಣೋತ್ತರ ಪರೀಕ್ಷೆ ನಡೆಸುವಂತೆ ಪೊಲೀಸರಿಗೆ ಮನವಿ ಮಾಡಿದ್ದು, ಈ ಸಂದರ್ಭ ಹೂತಿಡಲಾಗಿದ್ದ ಶವವನ್ನು ಹೊರ ತೆಗೆದು ಪರೀಕ್ಷೆ ಮಾಡಿದಾಗ ಮಗುವಿನ ತಲೆಗೆ ಬಲವಾದ ಏಟು ಬಿದ್ದಿದೆ ಎಂಬ ವರದಿ ಬಂದ ಹಿನ್ನೆಲೆ ಆಕೆಯನ್ನು ವಿಚಾರಣೆಗೆ ಒಳಪಡಿಸಿದಾಗ ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ.

Also Read  ಬೆಳ್ತಂಗಡಿ: ಲ್ಯಾಪ್‌ಟಾಪ್ ಕಳವುಗೈದು ಪರಾರಿಯಾಗಲೆತ್ನಿಸುತ್ತಿದ್ದ ಆರೋಪಿ ಅಂದರ್

error: Content is protected !!
Scroll to Top