(ನ್ಯೂಸ್ ಕಡಬ) newskadaba.com ಅಬುಧಾಬಿ, ಜ. 30. ಯುಎಇ ನಿವಾಸಿಗಳು ರಾಜಧಾನಿ ಅಬುಧಾಬಿಯನ್ನು ಪ್ರವೇಶಿಸಬೇಕಾದರೆ ಸಂಪರ್ಕ ಪತ್ತೆಹಚ್ಚುವ ‘ಅಲ್ ಹಸನ್’ ಎಂಬ ಆ್ಯಪ್ ಅನ್ನು ಚಾಲನೆಯಲ್ಲಿಡುವುದು ಅಗತ್ಯವಾಗಿದೆ ಎಂದು ಅಬುಧಾಬಿ ಪೊಲೀಸರು ಸೂಚಿಸಿದ್ದಾರೆ.
ಫೆಬ್ರವರಿ 1ರಿಂದ ಅಬುಧಾಬಿ ಪ್ರವೇಶಿಸ ಬಯಸುವವರು, ತಮಗೆ ಕೊರೋನ ವೈರಸ್ ಸೋಂಕು ಇಲ್ಲ ಎನ್ನುವುದನ್ನು ತೋರಿಸುವ ಪರೀಕ್ಷಾ ಫಲಿತಾಂಶ ಮತ್ತು ಕೊರೋನ ವೈರಸ್ ಪತ್ತೆಹಚ್ಚಲು ಯಾವ ಮಾದರಿಯ ಪರೀಕ್ಷೆಯನ್ನು ಮಾಡಲಾಗಿದೆ ಎನ್ನುವುದನ್ನು ಈ ಆ್ಯಪ್‌ನ ಮೂಲಕ ತೋರಿಸಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
Also Read ನೀವು ಇಷ್ಟಪಟ್ಟ ಹುಡುಗಿ ಜೊತೆಗೆ ವಿವಾಹ ಆಗಲು ಈ ಸಣ್ಣ ಕೆಲಸ ಮಾಡಿ ಸಾಕು ನಿಮ್ಮ ಕಷ್ಟಗಳು ಪರಿಹಾರ ಆಗುತ್ತದೆ