ಬಂಟ್ವಾಳ: ನಿಯಂತ್ರಣ ತಪ್ಪಿ 40 ಅಡಿ ಆಳಕ್ಕೆ ಉರುಳಿದ ಪೊಲೀಸ್ ಜೀಪ್..! ➤ ಎಸ್.ಐ ಹಾಗೂ ಚಾಲಕನಿಗೆ ಗಾಯ

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 30. ಚಾಲಕನ ನಿಯಂತ್ರಣ ತಪ್ಪಿದ ಪೋಲೀಸ್ ಜೀಪೊಂದು ಆಳಕ್ಕೆ ಬಿದ್ದ ಪರಿಣಾಮ ಎಸ್.ಐ ಹಾಗೂ ಚಾಲಕ ಗಾಯಗೊಂಡ ಘಟನೆ ಇಂದು ಮುಂಜಾನೆ ವೇಳೆ ಬಿಸಿರೋಡಿನಲ್ಲಿ ನಡೆದಿದೆ.

ಗಾಯಗೊಂಡವರನ್ನು ಬಂಟ್ವಾಳ ಗ್ರಾಮಾಂತರ ಠಾಣಾ ಅಪರಾಧ ವಿಭಾಗದ ಎಸ್.ಐ . ಸಂಜೀವ ಹಾಗೂ ಚಾಲಕ ಸತೀಶ್ ಎಂದು ಗುರುತಿಸಲಾಗಿದೆ. ಇಂದು ಬೆಳಗ್ಗೆ ಸುಮಾರು 4.30 ರ ವೇಳೆಗೆ ಬಿಸಿರೋಡಿನಿಂದ ಪಾಣೆಮಂಗಳೂರು ಕಡೆಗೆ ನೈಟ್ ರೌಂಡ್ಸ್ ನ ಡ್ಯೂಟಿಯಲ್ಲಿ ತೆರಳುತ್ತಿದ್ದ ವೇಳೆ ಬಿಸಿರೋಡಿನ ಸರ್ಕಲ್ ಬಳಿ ಮಸೀದಿ ಎದುರು ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿದ ಪೊಲೀಸ್ ಜೀಪು ಸುಮಾರು 40 ಅಡಿ ಆಳಕ್ಕೆ ಉರುಳಿ ಬಿದ್ದಿದೆ. ಘಟನೆಯಲ್ಲಿ ಎಸ್.ಐ.ಹಾಗೂ ಚಾಲಕ ಇಬ್ಬರಿಗೂ ಗಾಯಗಳಾಗಿದ್ದು, ಈ ದೃಶ್ಯವನ್ನು ನೋಡಿದ ಯುವಕರು ಅದೇ ಸಮಯದಲ್ಲಿ ಬರುತ್ತಿದ್ದ ಅಂಬ್ಯುಲೆನ್ಸ್ ವಾಹನದ ಮೂಲಕ ಮಂಗಳೂರಿಗೆ ಸಾಗಿಸಿ ಚಿಕಿತ್ಸೆ ನೀಡಿದ್ದಾರೆ.

Also Read  ತನಗೆ ತಾನೇ ವಾಟ್ಸ್​ ಆಪ್​ ನಲ್ಲಿ ಶ್ರದ್ಧಾಂಜಲಿ ಸ್ಟೇಟಸ್ ಹಾಕಿ ಆತ್ಮಹತ್ಯೆ ಮಾಡಿಕೊಂಡ ಯುವಕ..!

error: Content is protected !!
Scroll to Top