ಪುತ್ತೂರು: ಬೆಂಕಿ ಅವಘಡ ➤ ಮನೆ ಸಂಪೂರ್ಣ ಭಸ್ಮ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 30. ಇಲ್ಲಿನ ಮಹಾಲಿಂಗೇಶ್ವರ ದೇವಾಸ್ಥಾನದ ಬಳಿಯ ದೇವಮಾರು ಗದ್ದೆಯ ಸಮೀಪ ಮನೆಯೊಂದಕ್ಕೆ ಬೆಂಕಿ ಹತ್ತಿಕೊಂಡ ಪರಿಣಾಮ ಮನೆ ಸಂಪೂರ್ಣ ಸುಟ್ಟು ಕರಕಲಾದ ಘಟನೆ ಇಂದು ಪುತ್ತೂರಿನಲ್ಲಿ ನಡೆದಿದೆ.

ದೇವಾಲಯದ ಗದ್ದೆಯ ಸಮೀಪದ ಸ್ಮಶಾನಕ್ಕೆ ಹೋಗುವ ದಾರಿಯ ಸಮೀಪ ಈ ಮನೆಯಿದ್ದು, ಇಂದು ಮದ್ಯಾಹ್ನ ಈ ದುರ್ಘಟನೆ ಸಂಭವಿಸಿದೆ. ಈ ಮನೆಯಲ್ಕಿ ಪ್ಲಾಸ್ಟಿಕ್ ಬಕೆಟ್ ಹಾಗೂ ಇತರ ಪ್ಲಾಸ್ಟಿಕ್ ಉತ್ಪನ್ನಗಳನ್ನು ಮಾರಾಟ ಮಾಡುವ ಗದಗ ಮೂಲದ ವ್ಯಕ್ತಿಗಳು ವಾಸವಾಗಿದ್ದರು ಎನ್ನಲಾಗಿದೆ. ಇಲ್ಲಿ ವಾಸವಿದ್ದ ಮಕ್ಕಳು ಮದ್ಯಾಹ್ನದ ವೇಳೆ ಪಟಾಕಿ ಸಿಡಿಸಿದ್ದು, ಈ ಸಂದರ್ಭ ಬೆಂಕಿಯ ಕಿಡಿಗೆ ಬೆಂಕಿ ಅನಾಹುತ ಸಂಭವಿಸಿರಬಹುದು ಎಂದು ಸಂಶಯಿಸಲಾಗಿದೆ.

Also Read  ಮಹಾ ಕುಂಭಮೇಳದಲ್ಲಿ ಕಾಲ್ತುಳಿತ - ಪ್ರಧಾನಿ ಮೋದಿ ಸಂತಾಪ

error: Content is protected !!
Scroll to Top