ಮಂಗಳೂರು: ಕುಡಿತದ ಅಮಲಿನಲ್ಲಿ ಅಟೋ ಡ್ರೈವಿಂಗ್ ➤ ಪಾರ್ಕ್ ಮಾಡಿದ್ದ ಸ್ಕೂಟರ್ ಮೇಲೆಯೇ ರಿಕ್ಷಾ ಹತ್ತಿಸಿದ ಮದ್ಯಪಾನಿ…!

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 30. ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ಸ್ಕೂಟರ್ ಮೇಲೆ ಪಾನಮತ್ತನಾಗಿ ಅಮಲಿನಲ್ಲಿದ್ದ ಚಾಲಕನೋರ್ವ ಆಟೋ ರಿಕ್ಷಾ ಹತ್ತಿಸಿದ ಘಟನೆ ಮಂಗಳೂರು ಉಡುಪಿ ರಾಷ್ಟ್ರೀಯ ಹೆದ್ದಾರಿ 66ರ ಹಳೆಯಂಗಡಿ ಜಂಕ್ಷನ್ನಲ್ಲಿ ನಡೆದಿದೆ.


ಅಟೋ ಚಾಲಕ ಮದ್ಯದ ನಶೆಯಲ್ಲಿ ರಿಕ್ಷಾ ಚಲಾಯಿಸುತ್ತಿದ್ದ ವೇಳೆ ರಿಕ್ಷಾವನ್ನು ಪಾರ್ಕ್ ಮಾಡಲೆಂದು ಪಾರ್ಕಿಂಗ್ ಜಾಗಕ್ಕೆ ಬಂದು ಅಲ್ಲೇ ನಿಲ್ಲಿಸಿದ್ದ ಸ್ಕೂಟರ್ ಮೇಲೆಯೇ ತನ್ನ ರಿಕ್ಷಾವನ್ನು ಹತ್ತಿಸಿದ್ದಾನೆ . ಘಟನೆಯಲ್ಲಿ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿದೆ. ಇದನ್ನು ನೋಡಿದ ಸ್ಕೂಟಿ ಸವಾರ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಈ ವೇಳೆ ಚಾಲಕ ಹಾಗೂ ಸ್ಕೂಟಿ ಸವಾರನ ನಡುವೆ ಮಾತಿನ ಚಕಮಕಿ ನಡೆದಿದೆ.

Also Read  ಮಾದಕ ವ್ಯಸನಗಳ ನಿಯಂತ್ರಣ ಸಮಿತಿ ಸಭೆ

error: Content is protected !!
Scroll to Top