ಸುಳ್ಯ: ತಾಲೂಕು ಆರೋಗ್ಯಾಧಿಕಾರಿ ನಾಳೆ (ಜ. 31) ಸೇವೆಯಿಂದ ನಿವೃತ್ತಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 30. ತಾಲೂಕು ಆರೋಗ್ಯಾಧಿಕಾರಿಯಾಗಿ 2010ರಿಂದ ಕರ್ತವ್ಯದಲ್ಲಿದ್ದ ಡಾ.ಸುಬ್ರಹ್ಮಣ್ಯ ಎಂ.ಆರ್ ಅವರು ನಾಳೆ(ಜ. 31) ನಿವೃತ್ತಿ‌ ಹೊಂದಲಿದ್ದಾರೆ.

ಕುಕ್ಕೇ ಸುಬ್ರಹ್ಮಣ್ಯದವರಾದ ಇವರು ತನ್ನ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಹುಟ್ಟೂರಲ್ಲೇ ಪಡೆದು, ವೈದ್ಯಕೀಯ ಶಿಕ್ಷಣವನ್ನು ಮೈಸೂರಿನಲ್ಲಿ ಪಡೆದರು. ಎಂ.ಬಿ.ಬಿ.ಎಸ್ ಬಳಿಕ ಮಂಡ್ಯದಲ್ಲಿ ಕೆಲ ಕಾಲ ವೈದ್ಯರಾಗಿ ಸೇವೆ ಸಲ್ಲಿಸಿದ್ದರು. 1995ರಲ್ಲಿ ಸರಕಾರಿ ಸೇವೆಗೆ ನೇಮಕಾತಿ ಪಡೆದ ಇವರು ಪಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಯಾಗಿ ಬಳಿಕ 2006ರಲ್ಲಿ ತಾಲೂಕು ಪ್ರಭಾರ ಆರೋಗ್ಯಾಧಿಕಾರಿಯಾಗಿ ನಿಯೋಜನೆಗೊಂಡು 2010ರಲ್ಲಿ ಅಧಿಕೃತ ಆರೋಗ್ಯಾಧಿಕಾರಿಯಾಗಿ ತನ್ನ ಜವಾಬ್ದಾರಿಯನ್ನು ವಹಿಸಿಕೊಂಡರು. ಇವರು ದಿ.ರಾಮಸ್ವಾಮಿ ಹಾಗೂ ಹಾಜಮ್ಮ ದಂಪತಿಗಳ ಪುತ್ರ.

Also Read  ಬಂಧನದ ಮೂಲಕ ಶಂಕಿತ ಉಗ್ರರ ಪ್ಲ್ಯಾನ್ ವಿಫಲ- ಸಿಸಿಬಿ ಪೊಲೀಸರಿಗೆ ಸಿಎಂ ಅಭಿನಂದನೆ

error: Content is protected !!
Scroll to Top