ಸುಳ್ಯ: ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಜ.31ರಿಂದ ಫೆ. 07ರವರೆಗೆ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 29. ಕಳೆದ ಕೆಲವು ದಿನಗಳಿಂದ ಪ್ಲಾಸ್ಟಿಕ್ ನಿಷೇಧದ ಕೂಗು ಕೇಳಿಬರುತ್ತಿದ್ದರೂ ಯಾರೂ ಇದನ್ನು ಪರಿಗಣಿಸದೇ ಇರುವುದರ ಹಿನ್ನೆಲೆ ನಿಷೇಧ ಹೇರಿದರೂ ಕಂಡಕಂಡಲ್ಲಿ ಪ್ಲಾಸ್ಟಿಕ್ ಬಿಸಾಡುವುದನ್ನು ವಿರೋಧಿಸಿ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯನ್ನು ಸುಳ್ಯ ಎಸ್ಕೆಎಸ್ಸೆಸ್ಸೆಫ್ ವಿಖಾಯ ಸುಳ್ಯ ವಲಯ ವತಿಯಿಂದ ‘ಶುಚಿಯಾದ ಪರಿಸರಕ್ಕಾಗಿ ನಾಳಿನ ತಲೆಮಾರಿಗಾಗಿ ಪ್ಲಾಸ್ಟಿಕ್ ಮುಕ್ತರಾಗೋಣ’ ಎಂಬ ಧ್ಯೇಯ ವಾಕ್ಯದೊಂದಿಗೆ ಜ.31ರಿಂದ ಫೆ.7 ರ ವರೆಗೆ ನಡೆಯಲಿದೆ.


ಜನವರಿ 31 ರಂದು ಸುಳ್ಯದ ಎಲಿಮಲೆಯಲ್ಲಿ ದ.ಕ.ಜಿಲ್ಲಾ ವಿಖಾಯ ಚೇರ್ಮನ್ ಸಯ್ಯದ್ ಇಸ್ಮಾಯಿಲ್ ತಂಙಳ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ವಿವಿಧ ದಿನಗಳಲ್ಲಿ ಶಾಖಾ ಮಟ್ಟದಲ್ಲಿ ನಡೆಯುವ ಪ್ಲಾಸ್ಟಿಕ್ ಹೆಕ್ಕಿಕೊ ಚಳುವಳಿಯಲ್ಲಿ ಗ್ರಾಮ ಪಂಚಾಯತ್, ಸಂಘ ಸಂಸ್ಥೆಯವರು ಈ ಕಾರ್ಯಕ್ರಮದಲ್ಲಿ ಕೈಜೋಡಿಸಲಿದ್ದಾರೆ ಎಂದು ಸಂಘಟಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ವಿದ್ಯಾರ್ಥಿಗಳಿಗೆ ಸಿಗಲಿದೆ 15,000 ರೂ. ಗಳ ವಿದ್ಯಾಸಿರಿ ಸ್ಕಾಲರ್ಶಿಪ್...! ಇಂದೇ ಅರ್ಜಿ ಸಲ್ಲಿಸಿ

error: Content is protected !!
Scroll to Top