ಮಂಗಳೂರು: ಯೂನಿಯನ್ ಬ್ಯಾಂಕ್ – EDF ಟ್ರಸ್ಟ್ ನಿಂದ ಶುಶ್ರೂಷಕ ಕೊಠಡಿ ಕೊಡುಗೆ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 29. ಯೂನಿಯನ್ ಬ್ಯಾಂಕ್ – ಇಡಿಎಫ್ ಟ್ರಸ್ಟ್ (Economic Develop Foundation ) ನಿಂದ ರೂ.2,25,000/- ಗಳ ಕೊಡುಗೆಯನ್ನು ಭಗಿನೀ ಸಮಾಜಕ್ಕೆ ನೀಡಿ ಶುಶ್ರೂಷಕ ಕೊಠಡಿಯ ನಿರ್ಮಾಣದಲ್ಲಿ ಸಹಾಯ ಮಾಡಿದ್ದಾರೆ.

ಈ ಕಾರ್ಯಕ್ರಮದಲ್ಲಿ, ಯೂನಿಯನ್ ಬ್ಯಾಂಕ್‍ ಆಫ್‍ ಇಂಡಿಯಾದ ಮಂಗಳೂರು ಪ್ರಾದೇಶಿಕ ಕಛೇರಿಯ ಮುಖ್ಯಸ್ಥರಾದ ಶ್ರೀ ಜಗನ್ನಾಥ ಶೆಟ್ಟಿಯವರು, ಭಗಿನೀ ಸಮಾಜದ ಅಧ್ಯಕ್ಷರಾದ ಶ್ರೀಮತಿ ವಿಜಯಲಕ್ಷ್ಮಿ ಯು. ಭಟ್ ಹಾಗೂ ಭಗಿನೀ ಸಮಾಜದ ಅನ್ಯ ಸದಸ್ಯರು ಮತ್ತು ಮಕ್ಕಳು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಗಿನೀ ಸಮಾಜದ ಶುಶ್ರೂಷಕ ಕೊಠಡಿಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಜಗನ್ನಾಥ ಶೆಟ್ಟಿಯವರು, ಸರಕಾರದಿಂದ ನೀಡಲ್ಪಡುವ ವಿವಿಧ ಯೋಜನೆಗಳು ಫಲಾನುಭವಿಗಳಿಗೆ ತಲುಪುವ ಬಗ್ಗೆ ಹಾಗೂ ವಿದ್ಯಾರ್ಥಿಗಳಿಗೆ ಬ್ಯಾಂಕುಗಳಿಂದ ನೀಡಲಾಗುವ ಶಿಕ್ಷಣ ಸಾಲದ ಬಗ್ಗೆ ಮಾಹಿತಿ ನೀಡಿ, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ಮಾರ್ಗದರ್ಶನ ನೀಡಿದರು.

Also Read  ಶಿಕ್ಷಕರ ವರ್ಗ ಪರಿಷ್ಕೃತ ವೇಳಾಪಟ್ಟಿ ಪ್ರಕಟ..! ➤  ಜ.16ರವರೆಗೆ ಹೆಚ್ಚುವರಿ ಶಿಕ್ಷಕರ ದಾಖಲೆಗಳ ಪರಿಶೀಲನೆ 

error: Content is protected !!
Scroll to Top