ಮಂಜೇಶ್ವರ: ಬೇಕರಿ ಹಾಗೂ ಹೊಟೆಲ್ ನುಗ್ಗಿ ಕಳ್ಳತನಕ್ಕೆ ಯತ್ನ ➤ ಸಿಸಿಟಿವಿಯಲ್ಲಿ ದೃಶ್ಯ ಸೆರೆ



(ನ್ಯೂಸ್ ಕಡಬ) newskadaba.com  ಮಂಜೇಶ್ವರ, ಜ. 29. ಹೋಟೆಲ್ ಮತ್ತು ಬೇಕರಿಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ ಘಟನೆ ತೂಮಿನಾಡು ಎಂಬಲ್ಲಿ ನಡೆದಿದ್ದು, ಇದರ ದೃಶ್ಯವು ಸಿಸಿ ಕ್ಯಾಮರಾದಲ್ಲಿ ಪತ್ತೆಯಾಗಿದೆ.





ಇಲ್ಲಿನ ಮಾಸ್ಟರ್ ಮೈಂಡ್ ಜಂಕ್ಷನ್ ನಲ್ಲಿರುವ ಮೂಕಾಂಬಿಕಾ ಹೋಟೆಲ್ ಮತ್ತು ಹನಿ ಹೆಸರಿನ ಬೇಕರಿಗೆ ನುಗ್ಗಿ ಕಳ್ಳತನಕ್ಕೆತ್ನಿಸಿದ್ದಲ್ಲದೆ ಹೋಟೆಲ್ ನ ಗಾಜುಗಳನ್ನು ಪುಡಿಗೈದು ಬಳಿಕ ಹಣಕ್ಕಾಗಿ ತಡಕಾಡಿದ್ದಾನೆ. ಒಳಭಾಗದಿಂದಲೇ ನುಗ್ಗಿದ ಈತ ಕ್ಯಾಶ್ ಡ್ರವರನ್ನು ಚೆಲ್ಲಾಪಿಲ್ಲಿಗೊಳಿಸಿದ್ದಾನೆ. ಬೆಳಿಗ್ಗೆ ಕೃತ್ಯ ಬೆಳಕಿಗೆ ಬಂದಿದ್ದು, ಮಂಜೇಶ್ವರ ಠಾಣಾ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದರು.






error: Content is protected !!
Scroll to Top