ಅಂಬಾರಿ ಡ್ರೀಮ್‍ ಕ್ಲಾಸ್ ಮಲ್ಟಿ ಅಕ್ಸ್ ಲ್ ಎ.ಸಿ. ಸ್ಲೀಪರ್ ಸಾರಿಗೆ ಪ್ರಾರಂಭ

(ನ್ಯೂಸ್ ಕಡಬ) newskadaba.com  ಮಂಗಳೂರು, ಜ. 29. ಕ.ರಾ.ರ.ಸಾ.ನಿಗಮವು ಮಂಗಳೂರಿನಿಂದ ಉಡುಪಿ-ಕುಂದಾಪುರ-ಭಟ್ಕಳ-ಅಂಕೋಲಾ-ಹುಬ್ಬಳ್ಳಿ-ಧಾರವಾಡ-ಬೆಳಗಾಂ-ನಿಪ್ಪಾಣಿ ಮಾರ್ಗವಾಗಿ ಪೂನಾಕ್ಕೆ  ತೆರಳುತ್ತಿದ್ದ   ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಮೇಲ್ದರ್ಜೆಗೇರಿಸಿ “ಅಂಬಾರಿ ಡ್ರೀಮ್‍ ಕ್ಲಾಸ್ ಮಲ್ಟಿಅಕ್ಸ್‍ ಲ್ ಎ.ಸಿ. ಸ್ಲೀಪರ್” ವಾಹನದೊಂದಿಗೆ ಫೆಬ್ರವರಿ 01 ರಿಂದ ಕಾರ್ಯಾಚರಣೆ ಮಾಡಲಾಗುವುದು.


ಸಾರಿಗೆಯು ಮಂಗಳೂರು ಬಸ್ಸು ನಿಲ್ದಾಣದಿಂದ ಸಂಜೆ 4 ಗಂಟೆಗೆ ಹೊರಟು ಉಡುಪಿಗೆ 5.10ಕ್ಕೆ ತಲುಪಲಿದೆ., ಕುಂದಾಪುರದಿಂದ 6 ಗಂಟೆಗೆ ಹೊರಟು 7.30 ಕ್ಕೆ ಭಟ್ಕಳ ಮಾರ್ಗವಾಗಿ ಪೂನಾಕ್ಕೆ ಬೆಳಿಗ್ಗೆ 6.30ಕ್ಕೆ ತಲುಪಲಿದೆ. ಮರು ಪ್ರಯಾಣದಲ್ಲಿ ಪೂನಾದಿಂದ  ಸಂಜೆ 6.30 ಗಂಟೆಗೆ ಹೊರಟು ಕುಂದಾಪುರಕ್ಕೆ ಬೆಳಗ್ಗೆ 6.30ಕ್ಕೆ, ಹಾಗೂ ಉಡುಪಿಗೆ ಬೆಳಗ್ಗೆ 7.10 ಕ್ಕೆ ತಲುಪಲಿದೆ. ನಂತರ ಮಂಗಳೂರಿಗೆ ಬೆಳಿಗ್ಗೆ 8.10 ಕ್ಕೆ ತಲುಪಲಿದೆ. ಸದರಿ ಸಾರಿಗೆಯಲ್ಲಿ ಮಂಗಳೂರಿನಿಂದ ಪೂನಾಕ್ಕೆ ಪ್ರತಿ ಪ್ರಯಾಣಿಕರಿಗೆ ಪ್ರಯಾಣದರ ರೂ.1,340, ಉಡುಪಿಯಿಂದ ಪೂನಾಕ್ಕೆ ರೂ. 1,300 ಹಾಗೂ ಕುಂದಾಪುರದಿಂದ-ಪೂನಾಕ್ಕೆ ರೂ. 1,280 ನ್ನು ನಿಗಧಿ ಪಡಿಸಲಾಗಿದೆ. ಸಾರಿಗೆಗೆ ಅವತಾರ್ ಮೂಲಕ ಮುಂಗಡ ಆಸನ ಕಾದಿರಿಸುವ ವ್ಯವಸ್ಥೆ ಇದ್ದು, ಸಾರ್ವಜನಿಕರು www.ksrtc.in ಗೆ ಅಥವಾ ಹತ್ತಿರದ ರಿಸರ್ವೇಶನ್ ಕೌಂಟರ್ ನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಂಗಳೂರು ಬಸ್ಸು ನಿಲ್ದಾಣ ದೂ. ಸಂಖ್ಯೆ: 7760990720,  ಉಡುಪಿ ಬಸ್ಸು ನಿಲ್ದಾಣ ದೂ.ಸಂಖ್ಯೆ: 9663266400,  ಕುಂದಾಪುರ ಬಸ್ಸು ನಿಲ್ದಾಣ ದೂ.ಸಂಖ್ಯೆ: 9663266009 ಸಂಪರ್ಕಿಸಬಹುದು. ಅಥವಾ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮಂಗಳೂರು ವಿಭಾಗವನ್ನು ಸಂಪರ್ಕಿಸುವಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಖಾದ್ಯ ವೈವಿಧ್ಯ

error: Content is protected !!
Scroll to Top