ಅಕ್ರಮ ಗಾಂಜಾ ಮಾರಾಟ ➤ ಸಿಎ ವಿದ್ಯಾರ್ಥಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 29. ಡ್ರಗ್ಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ವಿಶ್ರುತ್ ಎನ್.ರಾಜ್ (27) ಎಂದು ಗುರುತಿಸಲಾಗಿದೆ. ಮೂಲತಃ ಆಂಧ್ರಪ್ರದೇಶ ನಿವಾಸಿಯಾದ ಈತ ಬಿ.ಕಾಂ. ಪದವೀಧರನಾಗಿದ್ದು, ಸಿ.ಎ ಪರೀಕ್ಷೆ ಕಟ್ಟಿದ್ದು, ಬೆಂಗಳೂರಿನ ಸಿ.ಎ ಕಛೇರಿಯೊಂದರಲ್ಲಿ ಕೆಲಸ ಮಾಡುತ್ತಲೇ ವಿದ್ಯೆ ಕಲಿಯುತ್ತಿದ್ದ. ಹಾಗೆಯೇ ಅಕ್ರಮ ಹಣ ಸಂಪಾದನೆಯ ಉದ್ದೇಶದಿಂದ ಡ್ರಗ್ಸ್ ಮಾರಾಟ ಮಾಡಲಾರಂಭಿಸಿದ್ದ. ಆಂಧ್ರಪ್ರದೇಶದ ಪರಿಚಯಸ್ಥರ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿದ್ದ. ಈತನಿಂದ 35ಲಕ್ಷ ರೂ. ಮೌಲ್ಯದ ಹ್ಯಾಶಿಷ್ ಹಾಗೂ ಗಾಂಜಾ ಜಪ್ತಿ ಮಾಡಲಾಗಿದೆ ಎಂದು ತಿಳಿದುಬಂದಿದೆ.

Also Read  ರಾಜ್ಯದಲ್ಲಿ ಇಂದು 14 ಮಂದಿ ಕೊರೋನ ಪಾಸಿಟಿವ್: ಸೋಂಕಿತರ ಸಂಖ್ಯೆ 862ಕ್ಕೆ ಏರಿಕೆ

error: Content is protected !!
Scroll to Top