ಕಡಬ: ಚೆಕ್ ಅಮಾನ್ಯ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಖುಲಾಸೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜ. 28. ಸರಸ್ವತಿ ಸೌಹಾರ್ದ ಕ್ರೆಡಿಟ್ ಸೊಸೈಟಿ ಇದರ ಕಡಬದ ಶಾಖೆಯಿಂದ ವಾಹನ ಖರೀದಿ ಸಾಲವನ್ನು ಪಡೆದ ‌ದಿನೇಶ್ ಎ ಬಿ ಎಂಬವರು ಅದರ ಮರುಪಾವತಿಗೆಂದು ನೀಡಿದ ಚೆಕ್ ಅಮಾನ್ಯ ಗೊಂಡಿರುವ ಕುರಿತು ನ್ಯಾಯಾಲಯದಲ್ಲಿ ‌ಪ್ರಕರಣ ದಾಖಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪುತ್ತೂರಿನ ಎರಡನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಪ್.ಸಿ ನ್ಯಾಯಲಯವು ಆರೋಪಿತನಿಂದ ಚೆಕ್ ನೀಡಲಾಗಿದೆ ಎಂದು ಸಂಸ್ಥೆ ಗೆ ಕಾನೂನಾತ್ಮಕವಾಗಿ ಆರೋಪಿತನಿಂದ ಚೆಕ್ ನಲ್ಲಿ ನಮೂದಿಸಿದ ಮೊತ್ತ ವನ್ನು ನೀಡಲು ಬಾಕಿ ಇದೆ ಎಂಬ ಬಗ್ಗೆ ದೂರುದಾರ ಸೊಸೈಟಿ ಸಾಬೀತು ಪಡಿಸಲು ವಿಫಲವಾಗಿದೆ ಎಂಬ ಕಾರಣಕ್ಕೆ ಆರೋಪಿಯನ್ನು ಖುಲಾಸೆಗೊಳಿಸಲಾಗಿದೆ. ಆರೋಪಿ ಪರ ಪುತ್ತೂರಿನ ಖ್ಯಾತ ನ್ಯಾಯವಾದಿ ಮುರಳಿಕೃಷ್ಣ ಚಳ್ಳಂಗಾರು ಎಂಬವರು ವಾದಿಸಿದ್ದರು.

Also Read  ತಡೆಗೋಡೆ ಕುಸಿದು ಬಿದ್ದು ಬಾಲಕ‌ ಮೃತ್ಯು !

error: Content is protected !!
Scroll to Top