ಜೇಸಿಐ ಕಡಬ ಕದಂಬ ಘಟಕದ ಪದಾಧಿಕಾರಿಗಳ ಪದಪ್ರದಾನ ಸಮಾರಂಭ ➤ ಅಧ್ಯಕ್ಷರಾಗಿ ತಿರುಮಲೇಶ್ ಭಟ್ ಅಧಿಕಾರ ಸ್ವೀಕಾರ

(ನ್ಯೂಸ್ ಕಡಬ) newskadaba.com ಕಡಬ, ಜ.28. ಜೇಸಿಐ ಕಡಬ ಕದಂಬ ಘಟಕದ ನೂತನ ಅಧ್ಯಕ್ಷರಾಗಿ ತಿರುಮಲೇಶ್ ಭಟ್ ಹೊಸ್ಮಠ ಹಾಗೂ ಕಾರ್ಯದರ್ಶಿಯಾಗಿ ಜೇಮ್ಸ್ ಕ್ರಿಶಾಲ್ ಡಿಸೋಜ ಅಧಿಕಾರ ಸ್ವೀಕರಿಸಿದರು.

ಕಡಬದ ಶ್ರೀ ದುರ್ಗಾಂಬಿಕಾ ಅಮ್ಮನವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಿಕಟಪೂರ್ವಾಧ್ಯಕ್ಷ ಮೋಹನ ಕೋಡಿಂಬಾಳ ಅವರು ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿದರು. ಉಪಾಧ್ಯಕ್ಷರಾಗಿ ಕಾಶೀನಾಥ ಗೋಗಟೆ, ಝಫೀರ್ ಮಹಮ್ಮದ್, ಡಾ| ರಾಮ ಪ್ರಕಾಶ್, ಪ್ರಸನ್ನ ಪುತ್ರಬೈಲು, ದಿವಾಕರ ಮುಂಡಾಲ, ಕೋಶಾಧಿಕಾರಿಯಾಗಿ ಅನೀಶ್ ಲೋಬೋ, ಜೊತೆ ಕಾರ್ಯದರ್ಶಿಯಾಗಿ ಜಯರಾಮ ಮೂರಾಜೆ, ನಿರ್ದೇಶಕರಾಗಿ ಕೃಷ್ಣ ಕಾರಂತ್, ಪುಷ್ಪರಾಜ್, ದಿನೇಶ್ ಟಿ.ಆರ್., ಶ್ರೀಕೃಷ್ಣ ಎಂ.ಆರ್., ಜಯರಾಮ ಕೋಡಿಂಬಾಳ, ಯುವ ಜೇಸಿ ಸಂಯೋಜಕರಾಗಿ ಚೇತನ್ ಉಳಿಪ್ಪು, ಯುವ ಜೇಸಿ ಅಧ್ಯಕ್ಷರಾಗಿ ಮಹಮ್ಮದ್ ಶಾನ್, ಜೇಸಿರೆಟ್ ವಿಭಾಗದ ಸಂಯೋಜಕರಾಗಿ ರಮೇಶ್ ಕೊಠಾರಿ, ಜೇಸಿರೆಟ್ ವಿಭಾಗದ ಅಧ್ಯಕ್ಷರಾಗಿ ಸರಯೂ ಭಟ್ ಅವರು ಆಯ್ಕೆಯಾಗಿದ್ದಾರೆ.

Also Read  ತುಳಸಿ ದೀಪಾರಾಧನೆ, ಪ್ರದಕ್ಷಣೆಯಿಂದ ಎಷ್ಟೆಲ್ಲ ಉಪಯೋಗ

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ| ಭಾಸ್ಕರ್ ಎಸ್. ಅವರು ಭಾಗವಹಿಸಿದ್ದರು. ಜೇಸಿಐ ಭಾರತದ ವಲಯ 15ರ ಉಪಾಧ್ಯಕ್ಷೆ ಹೇಮಲತಾ ಪ್ರದೀಪ್ ಅವರು ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಜೇಸಿಐ ಕಡಬ ಕದಂಬ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ನಾಗರಾಜ್ ಎನ್.ಕೆ., ಕಾರ್ಯದರ್ಶಿ ಜೇಮ್ಸ್ ಕ್ರಿಶಾಲ್ ಡಿಸೋಜ, ಯುವ ಜೇಸಿ ಅಧ್ಯಕ್ಷ ಮಹಮ್ಮದ್ ಶಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

error: Content is protected !!
Scroll to Top