ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಪ್ರಕಟ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜ. 28. 9 ಮತ್ತು 10ನೇ ತರಗತಿಯು ಆರಂಭವಾಗಿರುವ ಬೆನ್ನಲ್ಲೇ ರಾಜ್ಯ ಸರಕಾರವು ಇದೀಗ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಹಾಗೂ ದಿನಾಂಕವನ್ನು ಪ್ರಕಟಿಸಿದೆ.


ಜೂನ್ 14 ರಿಂದ 25ರವರೆಗೆ ಪರೀಕ್ಷೆ ನಡೆಯಲಿದ್ದು, ಜೂ.14ರಂದು ಪ್ರಥಮ ಭಾಷೆ, ಜೂ.16 ಗಣಿತ , ಜೂ.18ರಂದು ಇಂಗ್ಲೀಷ್ ಹಾಗೂ ಕನ್ನಡ, ಜೂ.21ರಂದು ವಿಜ್ಞಾನ, ಜೂ. 23ರಂದು ಹಿಂದಿ ಹಾಗೂ ಜೂ.25ರಂದು ಸಮಾಜ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ. ಇದು ತಾತ್ಕಾಲಿಕ ಪರೀಕ್ಷಾ ವೇಳಾಪಟ್ಟಿಯಾಗಿದ್ದು, ಯಾವುದೇ ವಿದ್ಯಾರ್ಥಿ ಅಥವಾ ಪೋಷಕರಿಗೆ ಈ ವೇಳಾಪಟ್ಟಿಯಲ್ಲಿ ಆಕ್ಷೇಪಗಳಿದ್ದಲ್ಲಿ ಫೆ.26ರೊಳಗೆ ಅರ್ಜಿ ಸಲ್ಲಿಸಬೇಕೆಂದು ಸಚಿವರು ಹೇಳಿದ್ದಾರೆ. ಈ ಹಿಂದೆ ಪರೀಕ್ಷಾ ಸಮಯ 3 ಗಂಟೆ ಇದ್ದು, ಈಗ ಹೆಚ್ಚುವರಿಯಾಗಿ 15 ನಿಮಿಷ ನೀಡಲಾಗಿದೆ.

Also Read  ಕಡಬ: ಬೃಹತ್ ಗಾತ್ರದ ಕಾಡುಕೋಣದ ಮೃತದೇಹ ಪತ್ತೆ

error: Content is protected !!
Scroll to Top