ಉಪ್ಪಿನಂಗಡಿ: ನಕಲಿ ಚಿನ್ನವನ್ನು ಅಡವಿಟ್ಟು ವಂಚನೆ ➤ ಪುತ್ತೂರು ಮೂಲದ ಆರೋಪಿಯ ಬಂಧನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ, ಜ. 28. ಸಹಕಾರಿ‌ ಸಂಸ್ಥೆಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ಗ್ರಾಹಕನಂತೆ ವರ್ತಿಸಿ, ಲಕ್ಷಾಂತರ ರೂ. ದೋಚಿದ ಆರೋಪಿಯನ್ನು ಬಂಧಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.


ಬಂಧಿತ ಆರೋಪಿಯನ್ನು ಪುತ್ತೂರು ತಾಲೂಕಿನ ಬೇರಿಕೆ ಕಾಯಕ್ಕಾಡ್ ನಿವಾಸಿ ಗಿರೀಶ್ ಕುಮಾರ್ (32) ಎಂದು ಗುರುತಿಸಲಾಗಿದೆ. ಎರಡು ದಿನಗಳ ಹಿಂದೆ ಕೇರಳ ನೋಂದಾವಣೆಯ ಕಾರಿನಲ್ಲಿ ಬಂದ ಈತ ಉಪ್ಪಿನಂಗಡಿಯ ಸಹಕಾರಿ ಬ್ಯಾಂಕೊಂದರಲ್ಲಿ ಚಿನ್ನವನ್ನು ಅಡವಿಟ್ಟು, ತಾನು ಬಿಝಿಯಿರುವುದರಿಂದ ಅರ್ಜೆಂಟ್ ಹಣ ಬೇಕೆಂದು ಕೇಳಿದ್ದು, ಸಿಬ್ಬಂದಿಗಳು ಚಿನ್ನವನ್ನು ಪರಿಶೀಲಿಸುವ ಮೊದಲೇ ಆತ ಹಣ ಒಯ್ದಿದ್ದ. ನಂತರ ಪರಿಶೀಲಿಸಿದಾಗ ನಕಲಿ ಚಿನ್ನವೆಂದು ಗೊತ್ತಾಗಿದ್ದು, ಈ ಕುರಿತು ದೂರು ದಾಖಲಾಗಿತ್ತು. ಒಂದೇ ದಿನ ಈತ ಎರಡು ಸಹಕಾರಿ ಬ್ಯಾಂಕ್ ಗಳಲ್ಲಿ ನಕಲಿ ಚಿನ್ನವನ್ನು ಅಡವಿಟ್ಟು ವಂಚಿಸಿದ್ದು, ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಬ್ಯಾಂಕ್ ನವರ ದೂರಿನಂತೆ ಆರೋಪಿಯನ್ನು ಬಂಧಿಸುವಲ್ಲಿ ಉಪ್ಪಿನಂಗಡಿ ಪೊಲೀಸ್ ಉಪನಿರೀಕ್ಷಕ ಈರಯ್ಯ ಡಿ.ಎನ್ ಹಾಗೂ ಸಿಬ್ಬಂದಿಗಳು ಯಶಸ್ವಿಯಾಗಿದ್ದಾರೆ.

Also Read  ಸಿವಿಲ್ ನ್ಯಾಯಾಧೀಶರ ನೇರ ನೇಮಕಾತಿಗೆ ಅಧಿಸೂಚನೆ

error: Content is protected !!
Scroll to Top