ಮಂಗಳೂರು: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ- ವಾರಸುದಾರರು ಸಂಪರ್ಕಿಸುವಂತೆ ಮನವಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. ತೋಟಬೆಂಗ್ರೆಯ ಅಳಿವೆಬಾಗಿಲಿನ ಬಳಿ ಫಲ್ಗುಣಿ ನದಿ ಸೇರುವ ಸ್ಥಳದ ನದಿ ಕಿನಾರೆಯಲ್ಲಿ ಸುಮಾರು 35-40 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಪತ್ತೆಯಾಗಿರುವ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.


ಮೃತ ವ್ಯಕ್ತಿಯು ಸುಮಾರು 5 ಅಡಿ 6 ಇಂಚು ಇದ್ದು, ದುಂಡು ಮುಖ, ಕಪ್ಪು ತಲೆ ಕೂದಲು, ದೃಢಕಾಯ ಶರೀರ ಹಾಗೂ ಗೋಧಿ ಬಣ್ಣ ಸಾಧಾರಣ ಮೈಕಟ್ಟನ್ನು ಹೊಂದಿರುತ್ತಾರೆ. ಕಪ್ಪು ನೀಲಿ ಹಾಗೂ ಬಿಳಿ ಮಿಶ್ರಿತವಾದ ದೊಡ್ಡ ತುಂಬುತೋಳಿನ ಶರ್ಟ್ ಧರಿಸಿರುತ್ತಾರೆ. ಈ ಚಹರೆಯುಳ್ಳ ಮೃತ ವ್ಯಕ್ತಿಯ ವಾರಸುದಾರರ ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆಯ ದೂ.ಸಂಖ್ಯೆ: 0824¬-2220530 ಅಥವಾ ಮಂಗಳೂರು ನಗರ ಕಂಟ್ರೋಲ್ ರೂಮ್ ಸಂಖ್ಯೆ: 0824-2220800 ನ್ನು ಸಂಪರ್ಕಿಸಬಹುದು ಎಂದು ಪಣಂಬೂರು ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Also Read  ಕಡಬ: ಪರ್ಸ್ ಎಗರಿಸಿದ ಅಪ್ರಾಪ್ತ ಬಾಲಕರು ➤ ಹಿಡಿದು ಪೋಲಿಸರಿಗೊಪ್ಪಿಸಿದ ಸ್ಥಳೀಯರು

error: Content is protected !!
Scroll to Top