ಮಂಗಳೂರು: 35 ಲಕ್ಷದ ಗಿಫ್ಟ್ ನಂಬಿ 1.35 ಲಕ್ಷ ಕಳೆದುಕೊಂಡ ವ್ಯಕ್ತಿ…! ➤ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲು

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 28. ವ್ಯಕ್ತಿಯೋರ್ವ 35 ಲಕ್ಷದ ಉಡುಗೊರೆಯ ಆಸೆಗಾಗಿ ಒಂದು ಲಕ್ಷದ ಮೂವತ್ತೈದು ಸಾವಿರ ರೂ.ಗಳನ್ನು ಕಳೆದುಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಜ.3 ರಂದು ರೆನಾಲ್ಡ್ ಪ್ರಿನ್ಸ್ ಕ್ರಿಸ್ಟಪರ್ ಎಂಬಾತ ಮಂಗಳೂರಿನ ವ್ಯಕ್ತಿಗೆ ಫೇಸ್ಬುಕ್ ಮೂಲಕ ಚಾಟಿಂಗ್ ನಲ್ಲಿ ತೊಡಗಿ, ಆತ್ಮೀಯತೆಯಿಂದ ವರ್ತಿಸಿ, ಚಿನ್ನ ಹಾಗೂ ವಜ್ರಾಭರಣಗಳನ್ನು ಕಳುಹಿಸಿಕೊಡುವುದಾಗಿ ನಂಬಿಸಿದ್ದ. ಬಳಿಕ ಜ.18ರಂದು ದೆಹಲಿ ಕಸ್ಟಮ್ಸ್ ಅಧಿಕಾರಿ ಎಂದು ಓರ್ವ ಮಹಿಳೆ ಕರೆ ಮಾಡಿ ನಿಮಗ್ ಏರ್ಪೋರ್ಟ್ ಗೆ ಪಾರ್ಸೆಲ್ ಬಂದಿದ್ದು, ಡೆಲಿವರಿ ಚಾರ್ಜ್ 35,000 ಸಾವಿರ ರೂ. ನೀಡುವಂತೆ ಹೇಳಿದ್ದಳು. ಅದರಂತೆ ಜ. 20 ರಂದು ಅದೇ ಮಹಿಳೆಯಿಂದ ಮತ್ತೆ ಕರೆ ಬಂದಿದ್ದು, ವಿವಿಧ ಕಾರಣಗಳನ್ನು ಹೇಳಿದ ಆಕೆ ಹಂತ ಹಂತವಾಗಿ ವಿವಿಧ ಬ್ಯಾಂಕ್ ಗೆ 1.35 ಲಕ್ಷ ರೂ. ಕಳುಹಿಸಿಕೊಡುವಂತೆ ಹೇಳಿ ಮೋಸ ಮಾಡಿದ್ದಾಳೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

Also Read  ಕಳೆದ ಒಂದು ವಾರದಲ್ಲಿ ಸಿಎಂ ಪ್ರಾಥಮಿಕ ಸಂಪರ್ಕಕ್ಕೆ ಬಂದವರು ನೂರಾರು ಮಂದಿ

error: Content is protected !!
Scroll to Top