(ನ್ಯೂಸ್ ಕಡಬ) newskadaba.com ಕಡಬ, ಅ.17. ಪಂಜ – ಕಡಬ ರಾಜ್ಯ ಹೆದ್ದಾರಿಯ ಓಂತ್ರಡ್ಕದಿಂದ ಪಂಜವರೆಗೆ 5.7 ಕಿ.ಮೀ. ಅಗಲೀಕರಣಗೊಂಡು ಮರು ಡಾಮರೀಕರಣಕ್ಕೆ 5 ಕೋಟಿ ರೂ.ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು. ಅವರು ಅ.17 ರಂದು ಪಂಜ ಕಡಬ ರಸ್ತೆಯ ಕೋಡಿಂಬಾಳದಲ್ಲಿ ರಸ್ತೆ ಕಾಮಗಾರಿಗೆ ತೆಂಗಿನ ಕಾಯಿ ಒಡೆದು ಗುದ್ದಲಿ ಪುಜೆ ನಡೆಸಿ ಮಾತನಾಡಿದರು.
ಕಡಬದಿಂದ ಓಂತ್ರಡ್ಕ ತನಕ ಈಗಾಗಲೇ 3 ಕೋಟಿ ರೂ.ಅನುದಾನದಲ್ಲಿ ಅಗಲೀಕರಣಗೊಂಡು ಮರುಡಾಮರೀಕರಣಗೊಂಡಿದ್ದು ಅಲ್ಲಿಂದ ಮುಂದೆ ಕೋಡಿಂಬಾಳದಿಂದ ಪಂಜ ರಸ್ತೆಯಲ್ಲಿ 5.7 ಕಿ.ಮೀ ರಸ್ತೆ ಅಗಲೀಕರಣ ಹಾಗೂ ಮರುಡಾಮರೀಕರಣಕ್ಕೆ ಸುಳ್ಯ ಶಾಸಕರ ಅನುದಾನದಲ್ಲಿ 4 ಕೋಟಿ ಹಾಗೂ ಪಂಜದಿಂದ ಇದೇ ರಸ್ತೆಯ ನೆಕ್ಕಿಲವರೆಗೆ 1.5 ಕಿ.ಮೀ ದೂರವನ್ನು ಮತ್ತೇ 1 ಕೋಟಿ ರೂ.ಅನುದಾನದಲ್ಲಿ ದುರಸ್ತಿಗೊಳಿಸಲಾಗುವುದು. ಒಟ್ಟಿನಲ್ಲಿ ಜನಪ್ರತಿನಿಧಿಗಳಾದ ನಮ್ಮಿಂದ ಸಾಧ್ಯವಾದಷ್ಟು ಮಟ್ಟಿಗೆ ಅಭಿವೃದ್ದಿ ಕಾರ್ಯಕ್ಕೆ ಪುರಕವಾಗಿ ಶ್ರಮಿಸುತ್ತೇವೆ. ರಸ್ತೆ ಪಕ್ಕದಲ್ಲಿರುವ ಮಾಲಕರು ಸಹಕರಿಸುವುದರೊಂದಿಗೆ ರಸ್ತೆಯನ್ನು ಅಗಲೀಕರಣಗೊಳಿಸಿ 2 ಕಡೆಯಲ್ಲೂ ಚರಂಡಿ ನಿರ್ಮಿಸುವಂತೆ ಸಹಕರಿಸಬೇಕು ಎಂದರು. ಸುಳ್ಯ ಪಿಡಬ್ಲ್ಯುಡಿ ಇಂಜಿನಿಯರ್ ಸಾಯಿಸಂದೇಶ್ ರಸ್ತೆ ಕಾಮಗಾರಿ ಕೂಡಲೇ ಪ್ರಾರಂಭಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಪಿ.ಪಿ ವರ್ಗೀಸ್, ತಾ.ಪಂ.ಸದಸ್ಯ ಫಝಲ್ ಕೋಡಿಂಬಾಳ, ಪಿ.ವೈ ಕುಸುಮಾ, ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ, ತಾ.ಪಂ.ಮಾಜಿ ಅಧ್ಯಕ್ಷೆ ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಹಿರಿಯರಾದ ಮಾಜಿ ತಾ.ಪಂ.ಸದಸ್ಯ ಸೀತಾರಾಮ ಗೌಡ ಕೋಡಿಂಬಾಳ, ಕಡಬ ಸಿಎ ಬ್ಯಾಂಕ್ನ ಅಧ್ಯಕ್ಷ ಸುಂದರ ಗೌಡ ಮಂಡೆಕರ, ಉಪಾಧ್ಯಕ್ಷ ರಮೇಶ್ ಕಲ್ಪುರೆ, ಪುತ್ತೂರು ಎಲ್ಡಿ ಬ್ಯಾಂಕ್ ಅಧ್ಯಕ್ಷ ಮನೋಹರ ರೈ, ಕಡಬ ಗ್ರಾ.ಪಂ. ಸದಸ್ಯರಾದ ಮಾಧವ ಎಚ್, ನಾರಾಯಣ ಪುಜಾರಿ, ಆದಂ ಕುಂಡೋಳಿ, ಕೃಷ್ಣಪ್ಪ ನಾಯ್ಕ, ಯಶೋಧ, ಇಂದಿರಾ ಕೃಷ್ಣಪ್ಪ, ಜಯಲಕ್ಷ್ಮೀ, ರೇವತಿ, ನೇತ್ರ, ಮಾಜಿ ಸದಸ್ಯೆ ಶೋಭಾ ಜಯಾನಂದ, ಮರ್ದಾಳ ಗ್ರಾ.ಪಂ.ಸದಸ್ಯ ದಾಮೋದರ ಗೌಡ ಡೆಪ್ಪುಣಿ, ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಪ್ರಭಾ, ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಬಾಬು ರೈ, ಬಿಜೆಪಿ ಮುಖಂಡ ಪುತ್ತುಮೇಸ್ತ್ರಿ, ಪ್ರಮುಖರಾದ ಪ್ರಶಾಂತ್ ಪಂಜೋಡಿ, ಅಬ್ದುಲ್ ರಹ್ಮಾನ್ ಅಡ್ಕಾಡಿ, ಉದ್ಯಮಿ ಹಾಜಿ ಡಿ.ಎಂ.ಆಲಿ, ಕೇಶವ ಬೇರಿಕೆ, ಕೆ.ಎಸ್ ಶೆರೀಫ್, ಶಿವಣ್ಣ ಗೌಡ ಪೊಸೊಳಿಕೆ, ವಿಠಲ ರೈ ಪಾಜೋವು, ಗಣೇಶ್ ಪಾಜೋವು, ತಿಮ್ಮಪ್ಪ ನಾಯ್ಕ ಪುಳಿಕುಕ್ಕು, ಹರೀಶ್ ಉಂಡಿಲ, ರಮೇಶ್, ವಿಷ್ಣು, ಮೊದಲಾದವರು ಉಪಸ್ಥಿತರಿದ್ದರು. ಹಿರಿಯರಾದ ಮಾಜಿ ತಾ.ಪಂ.ಸದಸ್ಯ ಸೀತಾರಾಮ ಗೌಡ ಕೋಡಿಂಬಾಳ ಇವರಿಗೆ ಶಾಸಕ ಅಂಗಾರ ಹಾರ ಹಾಕಿ ಗೌರವಿಸಿದರೆ ಶಿವಣ್ಣ ಗೌಡ ಪೊಸೊಳಿಗೆ, ನಾರಾಯಣ ಪುಜಾರಿ ಪಾಲಪ್ಪೆ, ರಘುರಾಮ ಕುಕ್ಕೆರೆಬೆಟ್ಟು, ಎ.ಬಿ ಮನೋಹರ ರೈ, ಕೃಷ್ಣಪ್ಪ ಮಡಿವಾಳ ಶಾಸಕ ಅಂಗಾರರವರಿಗೆ ಹಾರ ಹಾಕಿ ಗೌರವಿಸಿದರು. ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್ ಸ್ವಾಗತಿಸಿ, ಕಡಬ ಗ್ರಾಮ ಸಮಿತಿಯ ಗಿರೀಶ್ ಎ.ಪಿ ವಂದಿಸಿದರು. ಸುಳ್ಯ ಮಂಡಲ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಫಯಾಝ್ ಕೆನರ ಕಾರ್ಯಕ್ರಮ ನಿರೂಪಿಸಿದರು.