ಮಂಗಳೂರು: ರೈತರ ಹೋರಾಟ ಬೆಂಬಲಿಸಿ ಕ್ಯಾಂಪಸ್ ಫ್ರಂಟ್ ಜಾಥಾ- ಗಣರಾಜ್ಯೋತ್ಸವ ಆಚರಣೆ ➤ ‘ಫ್ಯಾಸಿಸ್ಟ್ ದುರಾಡಳಿತ ದೇಶವನ್ನು ನುಂಗುತ್ತಿದೆ’ – ಅರ್ಫೀದ್ ಅಡ್ಕಾರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 27. ದೇಶದಾದ್ಯಂತ ನಡೆಯುತ್ತಿರುವ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಕಾವೂರು ಏರಿಯಾದ ವತಿಯಿಂದ ಜೋಕಟ್ಟೆಯಿಂದ ಕೆ.ಬಿ.ಎಸ್ ತನಕ ಜಾಥಾ ಹಾಗೂ ಕೆ.ಬಿ.ಎಸ್ ಜಂಕ್ಷನ್‌ ನಲ್ಲಿ ಗಣರಾಜ್ಯೋತ್ಸವದ ಭಾಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.

ಏರಿಯಾ ಅಧ್ಯಕ್ಷ ಝಿಯಾದ್ ಜೋಕಟ್ಟೆ ಜಾಥಾಕ್ಕೆ ಚಾಲನೆ ನೀಡಿ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಕ್ಯಾಂಪಸ್ ಫ್ರಂಟ್ ಪುತ್ತೂರು ಜಿಲ್ಲಾ ಉಪಾಧ್ಯಕ್ಷರಾದ ಅರ್ಫೀದ್ ಅಡ್ಕಾರ್ ಮಾತನಾಡಿ, ಇಂದು ದೇಶ ಕಂಡರಿಯದ ರೈತರ ಹೋರಾಟಕ್ಕೆ ದೇಶ ಸಾಕ್ಷಿಯಾಗಿದೆ, ಫ್ಯಾಸಿಸ್ಟ್ ಸರಕಾರದ ಆಡಳಿತದಲ್ಲಿ ಪ್ರತೀ ವರ್ಗದ ಜನರು ಇಂದು ಬೀದಿಯಲ್ಲಿದ್ದಾರೆ. ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ಮಹಿಳೆಯರು ಇದೀಗ ಅನ್ನದಾತರು ಕೂಡಾ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸುವಂತಹ ದುರಾಡಳಿತ ದೇಶದಲ್ಲಿ ನಡೆಯುತ್ತಿದೆ ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ನಬೀಲ್ ಮೂಡಬಿದ್ರೆ ಉಪಸ್ಥಿತರಿದ್ದರು. ಕ್ಯಾಂಪಸ್ ಫ್ರಂಟ್ ಜಿಲ್ಲಾ ಕೋಶಾಧಿಕಾರಿ ಸರ್ಫರಾಝ್ ಅಂಗರಗುಂಡಿ ಕಾರ್ಯಕ್ರಮ ನಿರೂಪಿಸಿದರು.

Also Read  ಗೂಡುದೀಪದಲ್ಲಿ ಕೊರೊನಾ ಜಾಗೃತಿ ➤ ಹಲವರ ಗಮನ ಸೆಳೆಯುತ್ತಿದೆ ಈ ಗೂಡುದೀಪ

error: Content is protected !!
Scroll to Top