ಗೂನಡ್ಕ: ತೆಕ್ಕಿಲ್ ಶಾಲೆಯಲ್ಲಿ 72 ನೇ ಗಣರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com ಸುಳ್ಯ, ಜ. 27. ಗೂನಡ್ಕ ತೆಕ್ಕಿಲ್ ಮಾದರಿ ಹಿರಿಯ ಪ್ರಾಥಮಿಕ ಶಾಲೆ ತೆಕ್ಕಿಲ್ ಪ್ರೌಢಶಾಲೆ ವತಿಯಿಂದ 72 ನೇ ಗಣರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ತೆಕ್ಕಿಲ್ ಶಾಲಾ ಸ್ಥಾಪಕರಾದ ಟಿ.ಎಮ್.ಶಹೀದ್ ತೆಕ್ಕಿಲ್ ರವರು ಧ್ವಜರೋಹಣ ನೇರವೆರಿಸಿ ಮಾತನಾಡಿ, ದೇಶ ರಕ್ಷಣೆಗೆ ಸಂವಿಧಾನ ಅತ್ಯಗತ್ಯ ಆ ಸಂವಿಧಾನ ರೂಪಿಸಿದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ರವರನ್ನು ಸ್ಮರಿಸಿದರು. ಸಂವಿಧಾನ ಇಲ್ಲದೇ ಇರುತ್ತಿದ್ದರೆ ಭಾರತ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ರಾಷ್ಟ್ರ ರಕ್ಷಣೆ ಪ್ರತೀ ಪ್ರಜೆಯ ಹಕ್ಕಾಗಿರುತ್ತದೆ ಎಂದು ಹೇಳಿದರು.

Also Read  ಜಯನಗರ ಚುನಾವಣೆಯಲ್ಲಿ ಜಯದ‌ ನಗೆ ಬೀರಿದ ಕಾಂಗ್ರೆಸ್ ► ಮಾಜಿ ಗೃಹ ಸಚಿವರ ಪುತ್ರಿ ಸೌಮ್ಯ ರೆಡ್ಡಿಯ 'ಕೈ' ಹಿಡಿದ ಮತದಾರರು

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ವಾಣಿ, ದಿನಕರ ಸಣ್ಣಮನೆ, ಅಧ್ಯಾಪಕ ವೃಂದ, ರಕ್ಷಕರು ಹಾಗೂ ವಿಧ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಸಿಹಿತಿಂಡಿ ಹಂಚಲಾಯಿತು.

error: Content is protected !!
Scroll to Top