ಬೆಳ್ತಂಗಡಿ: ಸ್ನೇಹಿತರೊಂದಿಗೆ ಜಲಪಾತ ವೀಕ್ಷಣೆಗೆಂದು ತೆರಳಿದ್ದ ಯುವಕ ನೀರುಪಾಲು

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 25. ಇಬ್ಬರು ವ್ಯಕ್ತಿಗಳು ಜಲಪಾತಕ್ಕೆ ಮೋಜಿಗಾಗಿ ತೆರಳಿದ್ದ ವೇಳೆ ಅಯುತಪ್ಪಿ ಜಲಪಾತಕ್ಕೆ ಬಿದ್ದು, ಓರ್ವ ಮೃತಪಟ್ಟ ದುರ್ಘಟನೆ ಕುದುರೆಮುಖ ರಾಷ್ಟ್ರೀಯ ಉದ್ಯಾವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಮಲವಂತಿಗೆಯ ಎಳನೀರು ಘಾಟ್ ಬಂಗಾರಪಲ್ಕೆ ಅರಣ್ಯ ವ್ಯಾಪ್ತಿಯ ಬಡಮನೆಹಬ್ಬಿ ಎಂಬಲ್ಲಿ ನಡೆದಿದೆ.

ಮೃತ ಯುವಕನನ್ನು ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಕಾಶಿಬೆಟ್ಟು ನಿವಾಸಿ ಸನತ್ ಶೆಟ್ಟಿ(26) ಎಂದು ಗುರುತಿಸಲಾಗಿದೆ. ಇಲ್ಲಿ ಪ್ರವೇಶಕ್ಕೆ ಅನುಮತಿ ಇಲ್ಲದೇ ಇದ್ದರೂ 5 ಜನರ ತಂಡವು ಅನಧಿಕೃತವಾಗಿ ಬಂಗಾರಪಲ್ಕೆ ಅರಣ್ಯ ವ್ಯಾಪ್ತಿಯ ಬಡಮನೆ ಜಲಪಾತಕ್ಕೆ ತೆರಳಿದ್ದರು ಎನ್ನಲಾಗಿದೆ. ದಿಡುಪಿಯಿಂದ 10ಕಿ.ಮೀ. ದೂರವಿರುವ ದಟ್ಟ ಅರಣ್ಯ ವ್ಯಾಪ್ತಿಯ ಜಲಪಾತಕ್ಕೆ ದೂರವಾಣಿ ಸಂಪರ್ಕ ಇಲ್ಲದೇ ಇರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ ಎಂದು ತಿಳಿದುಬಂದಿದೆ.

Also Read  ಲಸಿಕೆ ವಂಚಿತ ಮಕ್ಕಳಿಗೆ ಲಸಿಕೆ ನೀಡುವುದು ಮುಖ್ಯ ಗುರಿ- ಡಾ. ಸತೀಶ್ಚಂದ್ರ

error: Content is protected !!
Scroll to Top