(ನ್ಯೂಸ್ ಕಡಬ) newskadaba.com ಪುತ್ತೂರು, ಜ. 25. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಡಗನ್ನೂರು ಗ್ರಾಮ ಸಮಿತಿ ಮತ್ತು ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಜಂಟಿ ಆಶ್ರಯದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ರವಿವಾರದಂದು ಪಡುವನ್ನೂರು ಉಪ ಆರೋಗ್ಯ ಕೇಂದ್ರದಲ್ಲಿ ಜರುಗಿತು.
ಮುಖ್ಯ ಅಥಿತಿಯಾಗಿ ಆಗಮಿಸಿದ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಮೆಡಿಕಲ್ ಆಫೀಸರ್ ಡಾ. ರಾಮಚಂದ್ರ ಭಟ್ ಮಾತನಾಡಿ, “ರಕ್ತದಾನ ಮಹಾದಾನ, ಪುತ್ತೂರಿನ ಏಕೈಕ ಬ್ಲಡ್ ಬ್ಯಾಂಕ್ ಆಗಿರುವ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ನಿಂದ ದಿನಂಪ್ರತಿ ಇಪ್ಪತ್ತರಷ್ಟು ಆಸ್ಪತ್ರೆಗಳಿಗೆ ರಕ್ತ ಪೂರೈಕೆ ಮಾಡಲಾಗುತ್ತಿದೆ. ರಕ್ತದ ಅಭಾವ ಬಹಳಷ್ಟಿದ್ದು, ಎಲ್ಲರೂ ರಕ್ತವನ್ನು ದಾನ ಮಾಡಬೇಕು” ಎಂದು ಮನವಿ ಮಾಡಿದರು. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಸಿದ್ದೀಕ್ ಕೆ.ಎ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಎಸ್.ಎಸ್.ಎಫ್ ಈಶ್ವರಮಂಗಲ ಸೆಕ್ಟರ್ ಮಾಜಿ ಅಧ್ಯಕ್ಷರಾದ ಅಬೂಬಕ್ಕರ್ ಲತೀಫಿ ಸಅದಿ ಪಮ್ಮಲೆ ಶುಭಕೋರಿದರು.
ಎಸ್.ಕೆ.ಎಸ್.ಎಸ್.ಎಫ್ ಬಡಗನ್ನೂರು ಅಧ್ಯಕ್ಷರಾದ ಸಲಾಹುದ್ದೀನ್ ಪದಡ್ಕ, ಎಸ್ಡಿಪಿಐ ಕುಂಬ್ರ ವಲಯ ಅಧ್ಯಕ್ಷರಾದ ಶರೀಫ್ ಕಟ್ಟತ್ತಾರು, ಪಡುವನ್ನೂರು ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ವನಿತಾ, ಎಸ್ಡಿಪಿಐ ಈಶ್ವರಮಂಗಲ ಸಮಿತಿ ಅಧ್ಯಕ್ಷರಾದ ಉಮ್ಮರ್ ಪಿ.ಎಂ, ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಸದಸ್ಯರಾದ ಸಂಶುದ್ದೀನ್, ರಿಯಾಝ್ ಮತ್ತಿತ್ತರು ಉಪಸ್ಥಿತರಿದ್ದರು. ಎಸ್ಡಿಪಿಐ ಬಡಗನ್ನೂರು ಸಮಿತಿ ಅಧ್ಯಕ್ಷರಾದ ಸಂಶುದ್ದೀನ್ ಪದಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸಂಶುದ್ದೀನ್ ಪೆರಿಗೇರಿ ಸ್ವಾಗತಿಸಿದರು. ಹಾರಿಸ್ ಎ.ಆರ್ ಕಾರ್ಯಕ್ರಮದ ನಿರೂಪಣೆಯನ್ನು ನಡೆಸಿದರು. ಈ ರಕ್ತದಾನ ಶಿಬಿರದಲ್ಲಿ ಸುಮಾರು 50ರಷ್ಟು ಯುವಕರು ಜಾತಿ-ಧರ್ಮ ಬೇಧವಿಲ್ಲದೇ ಸ್ವಯಂಪ್ರೇರಿತರಾಗಿ ರಕ್ತದಾನಗೈದು ಸಹಕರಿಸಿದರು.