ಮಂಗಳೂರು: ಸಿಎಫ್ಐ ಜಿಲ್ಲಾ ಪ್ರತಿನಿಧಿ ಸಭೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 25. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ಇದರ ಜಿಲ್ಲಾ ಪ್ರತಿನಿಧಿ ಸಭೆ ಕ್ಯಾಂಪಸ್ ಸೆಂಟರ್ ಮಂಗಳೂರಿನಲ್ಲಿ ನಡೆಯಿತು.

ಧ್ವಜಾರೋಹಣ ನಡೆಸಿದ ಬಳಿಕ ಕ್ಯಾಂಪಸ್ ಫ್ರಂಟ್ ಮಂಗಳೂರು ಜಿಲ್ಲಾಧ್ಯಕ್ಷ ಹಸನ್ ಸಿರಾಜ್ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಕರ್ನಾಟಕ ರಾಜ್ಯ ಉಪಾಧ್ಯಕ್ಷೆ ಮುಫೀದಾ ಉದ್ಘಾಟನಾ ಭಾಷಣ ಮಾಡಿದರು. ಮಂಗಳೂರು ಜಿಲ್ಲಾ ಕಾರ್ಯದರ್ಶಿ ಮುನೀರ್ ಬಜಾರ್ ವಾರ್ಷಿಕ ವರದಿ ಮಂಡಿಸಿದರು. ರಾಜ್ಯ ಸಮಿತಿ ಸದಸ್ಯ ಸಾದಿಕ್ ಮಂಗಳೂರು ಚುನಾವಣಾ ಪ್ರಕ್ರಿಯೆ ನಡೆಸಿದರು. ಮಂಗಳೂರು ನಗರ ಜಿಲ್ಲಾದ್ಯಕ್ಷರಾಗಿ ಇನಾಯತ್, ಕಾರ್ಯದರ್ಶಿಯಾಗಿ ಮುನೀರ್ ಬಜಾಲ್, ಮಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾಗಿ ಶರ್ಫುದ್ದೀನ್ ಬಜ್ಪೆ, ಕಾರ್ಯದರ್ಶಿಯಾಗಿ ಅಶ್ರಫ್ ಆಯ್ಕೆಯಾದರು.

Also Read  ಐಸಿಸ್ ನಲ್ಲಿ ಸಕ್ರಿಯವಾಗಿರುವ ಶಂಕೆ ➤ ಬೆಂಗಳೂರಿನ ದಂತವೈದ್ಯ ಅರೆಸ್ಟ್

error: Content is protected !!
Scroll to Top