ಮಂಗಳೂರು: ಮೀನು ಸಾಗಾಟದ ಸೋಗಿನಲ್ಲಿ ಅಕ್ರಮ ದನದ ಮಾಂಸ ಸಾಗಾಟಕ್ಕೆ ಯತ್ನ ➤ ಓರ್ವ ಅರೆಸ್ಟ್, ಉಳಿದವರಿಗೆ ಶೋಧ

(ನ್ಯೂಸ್ ಕಡಬ) newskadaba.com ಹಾಸನ, ಜ. 25. ಅಕ್ರಮ ಕಸಾಯಿಖಾನೆಗೆ ದಾಳಿ ನಡೆಸಿದ ಪೋಲಿಸರು, ಮೀನು ಸಾಗಾಟದ ಸೋಗಿನಲ್ಲಿ ಮಂಗಳೂರಿಗೆ ಗೋ ಮಾಂಸ ತರುತ್ತಿದ್ದ ಏಳು ವಾಹನಗಳನ್ನು ವಶಕ್ಕೆ ಪಡೆದು, ಇಬ್ಬರನ್ನು ಬಂಧಿಸಿದ ಘಟನೆ ನಡೆದಿದೆ.

ಮೀನು ಸಾಗಾಟದ ಟೆಂಪೋದಲ್ಲಿ ಪ್ಲಾಸ್ಟಿಕ್ ಪ್ಯಾಕ್ ನಲ್ಲಿ ಸುತ್ತಿಟ್ಟ ಬರೋಬ್ಬರಿ ನಾಲ್ಕು ಟನ್ ಮಾಂಸ ಪತ್ತೆಯಾಗಿದ್ದು, ಮಾಂಸವನ್ನು ಮಂಗಳೂರಿನ ಮಾರುಕಟ್ಟೆಗೆ ತರಲಾಗುತ್ತಿತ್ತು ಎನ್ನಲಾಗಿದೆ. ಇದರ ಖಚಿತ ಮಾಹಿತಿಯ ಆಧಾರದಲ್ಲಿ ಆಲೂರಿನ ಪ್ರಕೃತಿ ನಗರದ ಶೆಡ್ ಒಂದಕ್ಕೆ ದಾಳಿ ನಡೆಸಿದ್ದು ಈ ವೇಳೆ ಅಲ್ಲಿದ್ದ ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಬಳಿಕ ಪೊಲೀಸರು ಶೆಡ್ ನ ಸುತ್ತಮುತ್ತ ತನಿಖೆ ನಡೆಸಿದಾಗ ಮುನ್ನ ಎಂಬಾತ ಪೊದೆಗಳ ನಡುವೆ ಅವಿತಿದ್ದು, ಪೋಲಿಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಉಳಿದ ಆರೋಪಿಗಳಿಗಾಗಿ ಶೋಧಕಾರ್ಯ ಮುಂದುವರೆದಿದೆ.

Also Read  ಪುತ್ತೂರಿನಲ್ಲಿ ಬಿದಿರಿಗೆ ಕೊಡಲಿ ಏಟು ➤ ಸಮರ್ಥನೆ ನೀಡಿದ ಕಾರ್ಯಕ್ರಮದ ಆಯೋಜಕರು

error: Content is protected !!
Scroll to Top