ಕಡಬ: ದಲಿತ್ ಸೇವಾ ಸಮಿತಿ ವತಿಯಿಂದ ಸಮಾಲೋಚನಾ ಸಭೆ

(ನ್ಯೂಸ್ ಕಡಬ) newskadaba.com ಕಡಬ, ಜ. 25. ದಲಿತ್ ಸೇವಾ ಸಮಿತಿ ಕಡಬ ತಾಲೂಕು ಶಾಖೆ ಇದರ ಪದಾಧಿಕಾರಿಗಳ ಸಮಲೋಚನಾ ಸಭೆಯು ಜಿಲ್ಲಾಧ್ಯಕ್ಷ ಸೇಸಪ್ಪ ಬೆದ್ರಕಾಡು ಇವರ ನೇತೃತ್ವದಲ್ಲಿ ಭಾನುವಾರದಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.


ಈ ಸಭೆಯಲ್ಲಿ ಸಂಘಟನೆಯ ಕಾರ್ಯಚಟುವಟಿಕೆಗಳ ಕುರಿತು ಪದಾಧಿಕಾರಿಗಳ ಜೊತೆ ಚರ್ಚಿಸಿದ ಅವರು ಕಡಬ ಸೇರಿದಂತೆ ವಿವಿಧೆಡೆ ದಲಿತರ ಮೇಲಿನ ದೌರ್ಜನ್ಯ ಹೆಚ್ಚುತ್ತಿದ್ದು, ಇದು ಒಗ್ಗಟ್ಟಿನ ಕೊರತೆಯನ್ನು ತೋರಿಸುತ್ತದೆ ಎಂದರು. ದಲಿತರಿಗೆ ಬೇರೆಯವರಿಂದ ತೊಂದರೆಯುಂಟಾದಲ್ಲಿ ಅದನ್ನು ರಹಸ್ಯವಾಗಿಡದೇ ಸಂಘಟನೆಯ ಗಮನಕ್ಕೆ ತಂದು ಕಾನೂನು ಚೌಕಟ್ಟಿನಲ್ಲಿ ಬಗೆ ಹರಿಸುವಂತೆ ಕಿವಿ ಮಾತು ಹೇಳಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅಣ್ಣಿ ಎಳ್ತಿಮಾರ್, ಪುತ್ತೂರು ಶಾಖೆಯ ಅಧ್ಯಕ್ಷ ಅಣ್ಣಪ್ಪ ಕೆರೆಕಾಡ್, ಕಡಬ ಶಾಖೆಯ ಉಪಾಧ್ಯಕ್ಷ ದಿನೇಶ್ ಅಗತ್ತಾಡಿ, ಪ್ರಧಾನ ಕಾರ್ಯದರ್ಶಿ ತಾರಾನಾಥ ಕಡಿರಡ್ಕ ಸೇರಿದಂತೆ ವಿವಿಧ ಗ್ರಾಮ ಶಾಖೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

Also Read  ಎಟಿಎಂ ಕಾರ್ಡ್ ಬಳಸಿ ಲಕ್ಷಾಂತರ ಹಣ ವಂಚನೆ –  ಮೂವರು ಅರೆಸ್ಟ್

error: Content is protected !!
Scroll to Top