ವಿಟ್ಲ: ಎಸ್ಸಾರ್ ಪೆಟ್ರೋಲ್ ಬಂಕ್ ದೋಚಿದ ಕಳ್ಳರು

(ನ್ಯೂಸ್ ಕಡಬ) newskadaba.com ವಿಟ್ಲ, ಜ. 25. ವಿಟ್ಲ-ಪುತ್ತೂರು ರಸ್ತೆಯಲ್ಲಿರುವ ಎಸ್.ಆರ್ ಪೆಟ್ರೋಲ್ ಬಂಕ್ ಗೆ ನುಗ್ಗಿದ ಕಳ್ಳರು ಕಂಪ್ಯೂಟರ್ ಹಾಗೂ ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ವಸ್ತುಗಳನ್ನು ದೋಚಿದ ಘಟನೆ ನಡೆದಿದೆ.

ಘಟನೆಯಲ್ಲಿ ಕಛೇರಿಯಲ್ಲಿನ ಎಲ್ಲಾ ಲಾಕರ್ ಗಳನ್ನು ಒಡೆದು ಚೆಲ್ಲಾಪಿಲ್ಲಿ ಮಾಡಿದ್ದು, ಸುಮಾರು ಎರಡು ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ. ಬಂಕ್ ನಲ್ಲಿ ಎಷ್ಟು ಮೊತ್ತದ ನಗದನ್ನು ದೋಚಿದ್ದಾರೆ ಎಂಬುದು ತನಿಖೆಯಿಂದ ಹೊರಬರಬೇಕಷ್ಟೆ. ಮಾಣಿಯಲ್ಲಿರುವ ವೈನ್ ಶಾಪ್ ಗೂ ನಿನ್ನೆ ತಡರಾತ್ರಿ ಕಳ್ಳರು ನುಗ್ಗಿ ಸಣ್ಣ ಪ್ರಮಾಣದ ನಗದು ದೋಚಿದ್ದಾರೆ ಎನ್ನಲಾಗಿದೆ.

Also Read  ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಪ್ರಥಮ ಸ್ಥಾನ ಪಡೆದ ದಕ್ಷಿಣ ಕನ್ನಡ ► ಕೊನೆಯ ಸ್ಥಾನ ಯಾವ ಜಿಲ್ಲೆಗೆ ಗೊತ್ತೇ...?

error: Content is protected !!
Scroll to Top