ಬಂಟ್ವಾಳ: ಪತ್ರಕರ್ತನ ಫೇಸ್-ಬುಕ್ ಅಕೌಂಟ್ ಹ್ಯಾಕ್ ➤ ಫ್ರೆಂಡ್ ಲಿಸ್ಟ್ ನಲ್ಲಿರುವವರಿಗೆ ಹಣ ಕಳುಹಿಸುವಂತೆ ರಿಕ್ವೆಸ್ಟ್

(ನ್ಯೂಸ್ ಕಡಬ) newskadaba.com ಬಂಟ್ವಾಳ, ಜ. 25. ಪತ್ರಿಕೆಯ ವರದಿಗಾರರೊಬ್ಬರ ಫೇಸ್‌-ಬುಕ್ ಅಕೌಂಟ್ ಅನ್ನು ಹ್ಯಾಕ್ ಮಾಡಿ, ಅವರ ಫ್ರೆಂಡ್ ಲಿಸ್ಟ್‌ ನಲ್ಲಿರುವವರಿಗೆ ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಪುಂಜಾಲಕಟ್ಟೆಯ ಪತ್ರಕರ್ತ ರತ್ನದೇವ್ ಎಂಬವರ ಫೇಸ್‌ ಬುಕ್ ಖಾತೆಯನ್ನು ಹ್ಯಾಕ್ ಮಡಿ ಅವರ ಫ್ರೆಂಡ್ ಲಿಸ್ಟ್‌ ನಲ್ಲಿರುವವರಿಗೆ ‘ನನಗೆ ತುರ್ತಾಗಿ ಹಣದ ಅವಶಯಕತೆಯಿದ್ದು, ನಾಳೆ ಮರಳಿಸುತ್ತೇನೆ. ನಿಮ್ಮಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಇದ್ದರೆ ಹಣ ಕಳುಹಿಸಿ. ನನ್ನ ಸ್ನೇಹಿತನ ನಂಬರ್ ನೀಡುತ್ತೇನೆ. ಅದಕ್ಕೆ ಕಳುಹಿಸಿ, ನಾಳೆ ಮರಳಿಸುತ್ತೇನೆ’ ಎಂದಬ ಸಂದೇಶವನ್ನು ಹ್ಯಾಕರ್ ಕಳುಹಿಸುತ್ತಾರೆ. ವರದಿಗಾರನ ಸ್ನೇಹಿತರಿಗೆ ಈ ರೀತಿಯ ಸಂದೇಶಗಳು ಬಂದ ಹಿನ್ನೆಲೆ ಕೂಡಲೇ ಎಚ್ಚರಗೊಂಡ ಸ್ನೇಹಿತರು ಎಲ್ಲರಿಗೂ ಜಾಗೃತಿಯ ಸಂದೇಶ ನೀಡಿದ್ದಾರೆ. ವಿಷಯವನ್ನು ಬಂಟ್ವಾಳ ಪೊಲೀಸರಿಗೆ ದೂರು ನೀಡಲಾಗಿದ್ದು, ಹ್ಯಾಕರ್‌ ನ ಮೂಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿದಿದೆ.

Also Read  ಅಕ್ರಮ ಕಸಾಯಿಖಾನೆಗೆ ಪೊಲೀಸ್ ದಾಳಿ ➤ 23 ದನಗಳ ರಕ್ಷಣೆ

error: Content is protected !!
Scroll to Top