(ನ್ಯೂಸ್ ಕಡಬ) newskadaba.com ಸಾವೊ ಪೌಲೊ, ಜ. 25. ಭಾನುವಾರದಂದು ನಡೆದ ವಿಮಾನ ಅಪಘಾತದಲ್ಲಿ ಪಲ್ಮಾಸ್ ಫುಟ್‌ಬಾಲ್ ಕ್ಲಬ್‌ನ ಅಧ್ಯಕ್ಷ ಹಾಗೂ ನಾಲ್ವರು ಆಟಗಾರರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಕ್ಲಬ್ ಅಧ್ಯಕ್ಷ ಲೂಕಾಸ್ ಮೇರಾ, ಆಟಗಾರರಾದ ಲೂಕಾಸ್ ಪ್ರಕ್ಸಿಡಿಸ್, ಗುಲೆರ್ಮೆ ನೊಯೆ, ರಣುಲ್ ಮತ್ತು ಮಾರ್ಕಸ್ ಮೋಲಿನರಿ ಎಂದು ಗುರುತಿಸಲಾಗಿದೆ. ಬ್ರೆಜಿಲಿಯನ್ ಕಪ್ ಟೂರ್ನಿಯ ಪಂದ್ಯದಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ತಂಡವನ್ನು ಕರೆದೊಯ್ಯಲು ಸಜ್ಜಾಗಿದ್ದ ಲಘು ವಿಮಾನ ಟೇಕ್ ಆಫ್ ಸಂದರ್ಭದಲ್ಲಿ ಅಪಘಾತಕಕ್ಕೆ ಈಡಾಗಿತ್ತು.