ಮಂಗಳೂರು: ಸಮುದ್ರದಲ್ಲಿ ಮುಳುಗುತ್ತಿದ್ದ ಬೋಟ್ ರಕ್ಷಣೆ ➤ 8 ಮಂದಿಯನ್ನು ರಕ್ಷಿಸಿದ ಕೋಸ್ಟ್ ಗಾರ್ಡ್

(ನ್ಯೂಸ್ ಕಡಬ) newskadaba.com ಕಾರವಾರ, ಜ. 25. ಮೀನುಗಾರಿಕೆ ನಡೆಸುತ್ತಿದ್ದ ವೇಳೆ ಬೋಟ್ ತಳಭಾಗದ ಫೈಬರ್ ಒಡೆದು ಸಮುದ್ರದಲ್ಲಿ ಮುಳುಗುತ್ತಿದ್ದ 8 ಮಂದಿ ಮೀನುಗಾರರನ್ನು ಕರಾವಳಿ ಕಾವಲು ಪಡೆ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ಸಿಬ್ಬಂದಿಗಳು ರಕ್ಷಿಸಿದ ಘಟನೆ ವರದಿಯಾಗಿದೆ.

ಉಡುಪಿಯ ಶ್ರೀ ಸೌಪರ್ಣಿಕಾ ಎಂಬ ಬೋಟ್ ಕಾರವಾರ ಭಾಗದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಸಂದರ್ಭ ಬೋಟ್ ತಳಭಾಗದ ಫೈಬರ್ ಒಡೆದು ಹೋಗಿದ್ದು, ಬೋಟ್ ಸಂಪೂರ್ಣವಾಗಿ ಮುಳುಗುವ ಹಂತಕ್ಕೆ ತಲುಪಿತ್ತು. ಈ ವೇಳೆಯಲ್ಲಿ ಬೋಟ್ ನಲ್ಲಿದ್ದ ಮೀನುಗಾರರು ರಕ್ಷಣೆ ಮಾಡುವಂತೆ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದರು. ತಕ್ಷಣ ಸ್ಥಳಕ್ಕೆ ಆಗಮಿಸಿದ ಕರಾವಳಿ ಕಾವಲು ಪಡೆಯ ನಿಶ್ಚಲ್ ಕುಮಾರ್ ಹಾಗೂ ಇಂಡಿಯನ್ ಕೋಸ್ಟ್ ಗಾರ್ಡ್ ನ ಅಸಿಸ್ಟೆಂಟ್ ಕಮಾಂಡೆಂಟ್ ಶಶಾಂಕ್ ಕುಮಾರ್ ರವರ ತಂಡ ಮುಳುಗಡೆಯಾಗುತ್ತಿದ್ದ 8 ಮಂದಿ ಮೀನುಗಾರರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಸಂಘಪರಿವಾರದ ವಿರುದ್ದ ಪೋಸ್ಟ್ ಹಾಕಿರುವ ಆರೋಪ ➤ ನಟ ಚೇತನ್ ಅಹಿಂಸಾ ಬಂಧನ

error: Content is protected !!
Scroll to Top