(ನ್ಯೂಸ್ ಕಡಬ) newskadaba.com ಸವಣೂರು, ಜ. 25. ಗ್ರಾಮದ ಗುಂಡಿಲ ಅಬ್ದುಲ್ ಜಿ ಎಂಬವರ ಮನೆಯ ಹಿಂಬಾಗಿಲಿನ ಚಿಲಕವನ್ನು ಮುರಿದು ತೆರೆದು ಮನೆಯೊಳಗೆ ಪ್ರವೇಶಿಸಿದ ಕಳ್ಳರು ಡೈನಿಂಗ್ ಹಾಲಿನಲ್ಲಿ ಮಲಗಿದ್ದ ಅಬ್ದುಲ್ಲಾರ ಮಗಳು ಸಮೀಮಾ ಎಂಬವರ ಕುತ್ತಿಗೆಯಲ್ಲಿದ್ದ 8 ಗ್ರಾಂ ಚಿನ್ನದ ಸರ ಹಾಗೂ ಅಲ್ಲೇ ಪಕ್ಕದಲ್ಲಿ ಮಲಗಿದ್ದ ಮೊಮ್ಮಗಳು ಫಾತಿಮಾ ಸಿಮ್ರಾಳ ಕುತ್ತಿಗೆ ಯಲ್ಲಿದ್ದ 2 ಗ್ರಾಂ ಚಿನ್ನದ ಸರವನ್ನು ಕಳವು ಮಾಡಿದ್ದ ಘಟನೆ ನಡೆದಿದೆ.
ಕಳವಾದ ಚಿನ್ನಾಭರಣಗಳ ಮೌಲ್ಯ 40,000/- ಎಂದು ಅಂದಾಜಿಸಲಾಗಿದ್ದು,ಮನೆಯವರು ಮಲಗಿದ್ದ ವೇಳೆ ಈ ಘಟನೆ ನಡೆದಿದೆ. ಈ ಕುರಿತು ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
Also Read ಮಂಗಳೂರು:ಕೆನರಾ ಎಂಜಿನಿಯರಿಂಗ್ ಕಾಲೇಜಿನ ಅಶ್ವಿನಿ ಹೊಳ್ಳ ►ಅವರಿಗೆ ಐಇಇಇ ಅತ್ಯುತ್ತಮ ಘಟಕ ಕೌನ್ಸಿಲರ್ ಗೌರವ