ಶ್ರೀ ಚಕ್ರವರ್ತಿ ರಾಜನ್ ಶಿರಾಡಿ ದೈವ ಪೆತ್ತಾಳಮಾಳ್ಯ ಬ್ರಹ್ಮಕಲಶ ಮತ್ತು ನೇಮೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಜ.24. ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಪೆತ್ತಾಳಮಾಳ್ಯ ಶ್ರೀ ಚಕ್ರವರ್ತಿ ರಾಜನ್ ಶಿರಾಡಿ ಗ್ರಾಮದೈವ, ಗುಳಿಗ ದೈವ ಹಾಗೂ ಪರಿವಾರ ದೈವಗಳ ದೇವಸ್ಥಾನದ ಪುನರ್ ಪ್ರತಿಷ್ಠಾ ಬ್ರಜ್ಮಕಲಶ ಮತ್ತು ನೇಮೋತ್ಸವವು ಭಾನುವಾರ ಆರಂಭಗೊಂಡಿದ್ದು, ಬುಧವಾರದವರೆಗೆ ನಡೆಯಲಿದೆ.

ಇಂದು ಸಂಜೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ಆಗಮನದೊಂದಿಗೆ ಕಾರ್ಯಕ್ರಮ ಆರಂಭಗೊಂಡು ದೇವತಾ ಪ್ರಾರ್ಥನೆ, ಆಚಾರ್ಯವರಣೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಪ್ರಸಾದ ಶುದ್ಧಿ, ವನದುರ್ಗಾ ಹೋಮ, ರಕ್ಷೋಘ್ನ ಹೋಮ, ವಾಸ್ತುಹೋಮ, ವಾಸ್ತು ಪೂಜಾ ಬಲಿ, ನೂತನ ಬಿಂಬ ಜಲಾಧಿವಾಸ ಪ್ರಾಕಾರಬಲಿ ನಡೆದಿದ್ದು, ನಾಳೆ (ಜ.25) ಬೆಳಿಗ್ಗೆ 07 ಗಂಟೆಯಿಂದ ಮಹಾಗಣಪತಿ ಹೋಮ ಹಾಗೂ ಬ್ರಹ್ಮಕಲಶ ಪೂಜೆ, 9.52 ರಿಂದ 10.35 ರ ಮೀನ ಲಗ್ನ ಶುಭ ಮುಹೂರ್ತದಲ್ಲಿ ಶ್ರೀ ಚಕ್ರವರ್ತಿ ರಾಜನ್ ಶಿರಾಡಿ ಗ್ರಾಮ ದೈವ, ಗುಳಿಗ ದೈವ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠೆ ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ.

Also Read  ಕೊಡಗು: ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿ; ಪಿಡಿಓ ಮೇಲೆ ಹಲ್ಲೆ

ಮಂಗಳವಾರ (ಜ.26) ರಾತ್ರಿ 8 ಗಂಟೆಗೆ ಭಂಡಾರ ತೆಗೆಯಲಿದ್ದು, 9 ಗಂಟೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. ಬುಧವಾರ (ಜ.27) ಬೆಳಿಗ್ಗೆ 3 ಗಂಟೆಯಿಂದ ಚಕ್ರವರ್ತಿ ರಾಜನ್ ದೈವ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಲಿದ್ದು, ಮಧ್ಯಾಹ್ನ 12 ಗಂಟೆಗೆ ಅನ್ನ ಸಂತರ್ಪಣೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Also Read  ಮಂಗಳೂರು: ಅನಧಿಕೃತ ಮಾಂಸ ಮಾರಾಟ ಕಂಡು ಬಂದಲ್ಲಿ ಪರವಾನಿಗೆ ರದ್ದು

error: Content is protected !!
Scroll to Top