ಬೆಳ್ತಂಗಡಿ: ‘ತಾಂಟ್ ರೆ ಬಾ ತಾಂಟ್’ ಡೈಲಾಗ್ ಹೊಡೆದು ಯುವಕರಿಬ್ಬರಿಗೆ ಹಲ್ಲೆ ಪ್ರಕರಣ ➤ ಆರು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ತಾಂಟ್ ರೇ ಬಾ ತಾಂಟ್ ಎಂಬ ಡೈಲಾಗ್ ಹೊಡೆದು , ಜಗಳವಾಡಿ ವ್ಯಕ್ತಿಯೋರ್ವನಿಗೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.


ಬಂಧಿತ ಆರೋಪಿಗಳನ್ನು ಅಜಿತ್ ಕುಮಾರ್, ಅರುಣ್ ಕುಮಾರ್, ನಿತೀಶ್, ಆಶಿಶ್ ಕುಮಾರ್, ಪರಮೇಶ್ವರ್ ಮತ್ತು ನವೀನ‌ ಎಂದು ಗುರುತಿಸಲಾಗಿದೆ. ಅಲ್ತಾಫ್ ಎಂಬಾತ ಉಜಿರೆಯ ಎಂಪಾಯರ್ ಹೋಟೆಲ್ ವೊಂದರಲ್ಲಿ ಜ್ಯೂಸ್ ಮೇಕರ್ ಆಗಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದು, ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ ಎಂದು ಕೇಳಿದಾಗ ಅವರಲ್ಲಿ ಒಬ್ಬನು “ತಾಂಟ್ ರೇ ಬಾ ತಾಂಟ್” ಎಂಬುದಾಗಿ ಹೇಳಿ ಹೋಗಿದ್ದ. ಮತ್ತೆ ಎರಡು ದಿನದ ಬಳಿಕ ಅದೇ ವ್ಯಕ್ತಿ ಗುರಾಯಿಸಿ ನೋಡಿ ಆತನ ಜೊತೆಯಲ್ಲಿದ್ದ ಇತರರಿಗೆ ತೋರಿಸಿ ಈತನನ್ನು ನೋಡಿಕೊಳ್ಳಿ ಎಂದು ಹೇಳಿದ್ದನು. 23ರ ಶುಕ್ರವಾರದಂದು ರಾತ್ರಿ ಉಜಿರೆ ಎಂಪಾಯರ್ ಹೋಟೆಲ್ ನಿಂದ ಪಾರ್ಸೇಲ್ ಕೊಂಡು ಹೋಗಿ ಮರಳಿ ಬರುತ್ತಿದ್ದ ವೇಳೆ ಉಜಿರೆ ದ್ವಾರದ ಬಳಿ ತಲುಪಿದಾಗ ಈ ಹಿಂದೆ ಗುರಾಯಿಸಿ ನೋಡಿದ ವ್ಯಕ್ತಿಗಳು ಹಾಗೂ ಆತನ ಜೊತೆಯಲ್ಲಿದ್ದ 25-30 ಜನರ ತಂಡವು ಅಲ್ತಾಫ್ ರನ್ನು ತಡೆದು, ಅವಾಚ್ಯ ಶಬ್ದಗಳಿಂದ ಬೈಯುತ್ತ ಓರ್ವನ ಕೈಯಲ್ಲಿದ್ದ ಪೆಪ್ಸಿ ಬಾಟಲಿನಿಂದ ಅಲ್ತಾಫ್ ಗೆ ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಅಲ್ತಾಫ್ ನನ್ನು ರಕ್ಷಿಸಲು ಬಂದ ಸಹೋದರ ಮಹಮ್ಮದ್ ಅಶ್ರಫ್ ಎಂಬವವರಿಗೂ ಇವರು ಹಲ್ಲೆ ಮಾಡಿ ಕಾಲಿನಿಂದ ತುಳಿದು ಹಲ್ಲೆ ಮಾಡಿದ್ದು, ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಬಂಧಿಸಲಾಗಿದ್ದು ಉಳಿದವರಿಗಾಗಿ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.

Also Read  ಬೆಳ್ತಂಗಡಿಯ ಕೊಕ್ಕಡದಲ್ಲಿ ನಡೆದ ದರೋಡೆ ಪ್ರಕರಣ ➤ ತನಿಖೆ ಎರಡು ತಂಡ ರಚನೆ

error: Content is protected !!
Scroll to Top