ಮಂಗಳೂರು: ಲಾರಿಗಳಿಂದ ಬ್ಯಾಟರಿ ಕಳವು ಪ್ರಕರಣ ➤ ಆರೋಪಿ ಅಂದರ್

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ಜ.9ರಂದು ಪಣಂಬೂರಿನ ಎನ್.ಎಂಪಿಟಿ ಬಳಿಯ ಟಿಂಬರ್ ಯಾರ್ಡ್ ಬಳಿ ನಿಲ್ಲಿಸಿದ್ದ ಗಣೇಶ್ ಶಿಪ್ಪಿಂಗ್ ಏಜನ್ಸಿಗೆ ಸೇರಿದ ಲಾರಿಗಳಿಂದ ಐದು ಬ್ಯಾಟರಿ ಕಳವು ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಯನ್ನು ಬಜಾಲ್ ನಿವಾಸಿ ಎ.ಎಂ. ಇರ್ಫಾನ್ ಅಲಿಯಾಸ್ ಇರ್ಫಾನ್ (25) ಎಂದು ಗುರುತಿಸಲಾಗಿದೆ.‌ ಈತನ ಬಳಿಯಿದ್ದ ಕಳ್ಳತನ ಮಾಡಿದ್ದ ಐದು ಲಾರಿಯ ಬ್ಯಾಟರಿಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಗಣೇಶ್ ಶಿಪ್ಪಿಂಗ್ ಏಜೆನ್ಸಿ ಮ್ಯಾನೇಜರ್ ನೀಡಿದ ದೂರಿನಂತೆ ಪಣಂಬೂರು ತನಿಖೆ ನಡೆಸಿದ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

Also Read  ➤ ಮುಂದಿನ 3 ದಿನಗಳಲ್ಲಿ ಹಲವು ರಾಜ್ಯಗಳಲ್ಲಿ ಮಳೆ ಸಾಧ್ಯತೆ

error: Content is protected !!
Scroll to Top