ಅಕ್ರಮ ಸೇಂದಿ ಮಾರಾಟ ➤ 20 ಲೀ. ಸೇಂದಿ ವಶ, ಆರೋಪಿಗಳು ಪರಾರಿ

(ನ್ಯೂಸ್ ಕಡಬ) newskadaba.com ಕೊರಟಗೆರೆ, ಜ. 24. ಅಕ್ರಮವಾಗಿ ಸೇಂದಿ ಮಾರಾಟ ಮಾಡುತ್ತಿದ್ದ ವೇಳೆ 20 ಲೀ. ಸೇಂದಿಯನ್ನು ವಶಪಡಿಸಿಕೊಂಡ ಘಟನೆ ಕೊರಟಗೆರೆ ತಾಲೂಕಿನ ಶಿಕಾರಿಪುರ ಕ್ರಾಸ್ಸಿನ ಬಳಿ ನಡೆದಿದೆ.

ಆಂಧ್ರ ಪ್ರದೇಶದಿಂದ ಕರ್ನಾಟಕಕ್ಕೆ ಶನಿವಾರದಂದು ಅಕ್ರಮವಾಗಿ ಸೇಂದಿ ಸಾಗಾಟ ಮಾಡುತ್ತಿದ್ದ ವೇಳೆ ಖಚಿತ ಮಾಹಿತಿಯನ್ನು ಪಡೆದ ಅಬಕಾರಿ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿಯಲ್ಲಿ 42 ಸಾವಿರ ಮೌಲ್ಯದ ದ್ವಿಚಕ್ರ ವಾಹನ ಮತ್ತು 20 ಲೀ ಸೇಂದಿಯನ್ನು ವಶಕ್ಕೆ ಪಡೆಯಲಾಗಿದ್ದು, ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.

Also Read  ಮಡಿಕೇರಿ: ವಿವಾಹಿತ ಮಹಿಳೆಯ ಅನುಮಾನಾಸ್ಪದವಾಗಿ ಮೃತ್ಯು

error: Content is protected !!
Scroll to Top