(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜ. 24. ಸರಿಸುಮಾರು 25ಕ್ಕಿಂತಲೂ ಅಧಿಕ ಜನರ ತಂಡವೊಂದು ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿದ ಘಟನೆ ಬೆಳ್ತಂಗಡಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದವರನ್ನು ಬೆಳ್ತಂಗಡಿ ತಾಲೂಕಿನ ಸುದೇಮುಗೇರು ನಿವಾಸಿ ಮಹಮ್ಮದ್ ಅಲ್ತಾಫ್ (21) ಎಂದು ಗುರುತಿಸಲಾಗಿದೆ. ಅಲ್ತಾಫ್ ಎಂಬವರು ಉಜಿರೆಯ ಎಂಪಾಯರ್ ಹೋಟೆಲ್ ನಲ್ಲಿ ಜ್ಯೂಸ್ ಮೇಕರ್ ಆಗಿ ಕೆಲಸ ಮಾಡಿಕೊಂಡಿದ್ದು, ಒಂದು ವಾರದ ಹಿಂದೆ ಹೋಟೆಲ್ ಗೆ ಬಂದ ಗಿರಾಕಿಗಳಲ್ಲಿ ಕೆಲವರು ಗುರಾಯಿಸಿ ನೋಡಿದ್ದಕ್ಕೆ ಅವರಲ್ಲಿ ನೀನು ಯಾಕೆ ನನ್ನನ್ನು ಗುರಾಯಿಸಿ ನೋಡಿದ್ದಿ ಎಂದು ಕೇಳಿದಾಗ, ಒಬ್ಬನು “ತಾಂಟ್ ರೇ ಬಾ ತಾಂಟ್” ಎಂಬುದಾಗಿ ಹೇಳಿ ಹೋಗಿದ್ದು, ಪುಃನ ಎರಡು ದಿನದ ಹಿಂದೆ ಅದೇ ವ್ಯಕ್ತಿ ಅಲ್ತಾಪ್ ನನ್ನು ಗುರಾಯಿಸಿ ನೋಡಿ ಆತನ ಜೊತೆಯಲ್ಲಿದ್ದ ಇತರರಿಗೆ ತೋರಿಸಿ ಈತನನ್ನು ನೋಡಿಕೊಳ್ಳಿ ಎಂದು ಹೇಳಿದ್ದನು. ಅದೇ ದಿನ ರಾತ್ರಿ ಉಜಿರೆ ಎಂಪಾಯರ್ ಹೋಟೆಲ್ ನಿಂದ ಪಾರ್ಸೆಲ್ ಕೊಂಡು ಹೋಗಿ ಮರಳಿ ಬರುತ್ತಿದ್ದ ವೇಳೆ ಉಜಿರೆ ದ್ವಾರದ ಬಳಿ ತಲುಪಿದಾಗ ಈ ಹಿಂದೆ ಗುರಾಯಿಸಿ ನೋಡಿದ ವ್ಯಕ್ತಿಗಳು ಹಾಗೂ ಆತನ ಜೊತೆಯಲ್ಲಿದ್ದ 25-30 ಜನ ಅಲ್ತಾಪ್ ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈಯ್ದು ಓರ್ವನ ಕೈಯ್ಯಲ್ಲಿದ್ದ ಪೆಪ್ಸಿ ಬಾಟಲಿನಿಂದ ಅಲ್ತಾಪ್ ನ ಹಣೆಗೆ ಹೊಡೆದು ಉಳಿದವರು ಕೈಯಿಂದ ಹಲ್ಲೆ ಮಾಡಿದ್ದಾರೆ ಎಂದು ಅಲ್ತಾಪ್ ಆರೋಪಿಸಿದ್ದಾರೆ. ಬಿಡಿಸಲು ಬಂದ ಅಲ್ತಾಪ್ ಸಹೋದರ ಮಹಮ್ಮದ್ ಅಶ್ರಫ್ ರವರಿಗೂ ಹೆಲ್ಮಟ್ ನಿಂದ ಬಲಬದಿ ಬೆನ್ನಿಗೆ ಕಾಲಿನಿಂದ ತುಳಿದು, ಹಲ್ಲೆ ಮಾಡಿದ್ದು ಅವರಿಗೂ ಗಾಯವಾಗಿದೆ. ಈ ಬಗ್ಗೆ ಸುಮಾರು 25ರಿಂದ 30ಜನರ ವಿರುದ್ದ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.