(ನ್ಯೂಸ್ ಕಡಬ) newskadaba.com ಸುಳ್ಯ, ಜ. 24. ಇಲ್ಲಿನ ಕೇರ್ಪಳ ಎಂಬಲ್ಲಿನ ಮಹಿಳೆಯೋರ್ವರು ಜ.18ರಂದು ಕಾಣೆಯಾಗಿದ್ದು, ಇದೀಗ ಅವರ ಮೃತದೇಹವು ಪಯಸ್ವಿನಿ ಹೊಳೆಯಲ್ಲಿ ಪತ್ತೆಯಾಗಿದೆ.
ಸುಳ್ಯದ ಕೇರ್ಪಳದಲ್ಲಿ ಬಾಡಿಗೆ ಕೋಣೆಯಲ್ಲಿರುವ ಆನಂದ ಎಂಬವರ ಪತ್ನಿ ಚಂದ್ರಾವತಿಯವರ ಮೊಬೈಲ್ ಫೋನ್ ಮತ್ತು ಪರ್ಸ್ ನದಿಯಲ್ಲಿದ್ದುದನ್ನು ಕಂಡು ಸ್ಥಳೀಯರು, ಅಗ್ನಿಶಾಮಕ ದಳ ಹಾಗೂ ಗೃಹರಕ್ಷಕ ದಳದವರು ಸೇರಿ ಹೊಳೆಯಲ್ಲಿ ಹುಡುಕಾಟ ನಡೆಸಿದ್ದರೂ ಮೃತದೇಹ ಪತ್ತೆಯಾಗಿರಲಿಲ್ಲ ಹಾಗೂ ಮನೆಗೂ ಹಿಂತಿರುಗಿರಲಿಲ್ಲ. ಇದೀಗ ಜ.23 ರಂದು ನಾರ್ಕೋಡು ಸಮೀಪ ಪಯಸ್ವಿನಿ ಹೊಳೆಯ ನೀರಲ್ಲಿ ಚಂದ್ರಾವತಿಯವರ ಮೃತದೇಹ ಪತ್ತೆಯಾಗಿದೆ. ಸ್ಥಳಕ್ಕೆ ಸುಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.