ಮಂಗಳೂರು: ಅಶ್ವತ್ಥ ಮರ ಬಿದ್ದು ವಾಹನಗಳು ಜಖಂ

(ನ್ಯೂಸ್ ಕಡಬ) newskadaba.com ಮಂಗಳೂರು, ಜ. 24. ಇಲ್ಲಿನ ರಥಬೀದಿಯಲ್ಲಿರುವ ವೆಂಕಟರಮಣ ದೇವಸ್ಥಾನದ ಮುಂದೆ ಇದ್ದ ಅಶ್ವತ್ಥ ಕಟ್ಟೆಯ ಹಳೆಯದಾದ ಮರವೊಂದು ಬುಡ ಸಮೇತ ಉರುಳಿ ಬಿದ್ದ ಪರಿಣಾಮ ‌ಟ್ಯಾಂಕರ್, ಜೆಸಿಬಿ ಹಾಗೂ ಕಾರಿಗೆ ಹಾನಿಯಾಗಿದೆ.

ಬೆಳಗ್ಗಿನ ಜಾವ ಈ ಘಟನೆ ನಡೆದಿದ್ದು ಮರದಡಿ ನಿಲ್ಲಿಸಿದ್ದ ಒಂದು ನೀರಿನ ಟ್ಯಾಂಕರ್, ಜೆಸಿಬಿ ಮತ್ತು ಒಂದು ಕಾರಿನ ಮೇಲೆ ಮರದ ಕೊಂಬೆಗಳು ಬಿದ್ದು ಹಾನಿಯಾಗಿದೆ. ಈ ಸಂದರ್ಭ ಆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ.

Also Read  ಇಂದು ಮಳೆ ಕೊಯ್ಲು ಉಚಿತ ಕಾರ್ಯಗಾರ

error: Content is protected !!
Scroll to Top