ತೊಕ್ಕೊಟ್ಟು: ಅಪರಿಚಿತ ವಾಹನ ಢಿಕ್ಕಿ ಹೊಡೆದು ಪರಾರಿ ➤ ವೃದ್ದ ಸ್ಥಳದಲ್ಲೇ ಮೃತ್ಯು



(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 24. ಪಾದಚಾರಿ ವೃದ್ದರೋರ್ವರಿಗರ ಅಪರಿಚಿತ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ವೃದ್ದ ಸ್ಥಳದಲ್ಲೇ ಮೃತಪಟ್ಟ ಘಟನೆ ನಸುಕಿನ ಜಾವ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.





 

ಮೃತರನ್ನು ಪಾಣೆಮಂಗಳೂರಿನ ನಿವಾಸಿ ಹಮ್ಮಬ್ಬ (60) ಎಂದು ಗುರುತಿಸಲಾಗಿದೆ. ಇವರು ತೊಕ್ಕೊಟ್ಟು ಸಹರಾ ಆಸ್ಪತ್ರೆಯ ಎದುರು ರಸ್ತೆ ದಾಟುತ್ತಿದ್ದ ವೇಳೆ ಅಪರಿಚಿತ ವಾಹನವು ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಪರಿಣಾಮ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇವರು ತೊಕ್ಕೊಟ್ಟಿನ ಕಲ್ಲಾಪಿನಲ್ಲಿರುವ ಸಂಬಂಧಿಕರ ಮ‌ನೆಗೆ ಬಂದಿದ್ದರೆನ್ನಲಾಗಿದೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






error: Content is protected !!
Scroll to Top