ಉಳ್ಳಾಲ: ಮಹಿಳೆಗೆ ಅತ್ಯಾಚಾರ ಹಾಗೂ ಮಕ್ಕಳಿಗೆ ಕಿರುಕುಳ ಪ್ರಕರಣ ➤ ಎಸ್ಡಿಪಿಐ ಮುಖಂಡನ ಬಂಧನ

(ನ್ಯೂಸ್ ಕಡಬ) newskadaba.com ಉಳ್ಳಾಲ, ಜ. 23. ಮತಾಂತರಗೊಂಡ ಮಹಿಳೆಗೆ ಸಹಾಯದ ನೆಪವಿಟ್ಟು ಅತ್ಯಾಚಾರವೆಸಗಿ ಆಕೆಯ ಇಬ್ಬರು ಹೆಣ್ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ಉಳ್ಳಾಲದ ಎಸ್ಡಿಪಿಐ ಮುಖಂಡನನ್ನು ಉಳ್ಳಾಲ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

 

ಬಂಧಿತ ಆರೋಪಿಯನ್ನು SDPI ಮುಖಂಡ ಸಿದ್ದೀಕ್ ಎಂದು ಗುರುತಿಸಲಾಗಿದೆ. ಈ ಸಂತ್ರಸ್ತ ಮಹಿಳೆಯು ಗಂಡನಿಂದ ದೂರವಾಗಿ ಉಳ್ಳಾಲದ ಒಂಭತ್ತುಕೆರೆ ಎಂಬಲ್ಲಿ ತನ್ನ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳೊಂದಿಗೆ ವಾಸಿಸುತ್ತಿದ್ದು, ಈಕೆಗೆ ಸಹಾಯ ಮಾಡೋ ನೆಪದಲ್ಲಿ ಸ್ನೇಹ ಬೆಳೆಸಿಕೊಂಡ ಸಿದ್ದೀಕ್ ಆಕೆಯನ್ನು ಅತ್ಯಾಚಾರಗೈದಿದ್ದಲ್ಲದೇ, ಆಕೆಯ ಇಬ್ಬರು ಅಪ್ರಾಪ್ತ ಹೆಣ್ಮಕ್ಕಳಿಗೂ ಲೈಂಗಿಕ ಕಿರುಕುಳ ನೀಡಿದ್ದ. ಆತನ ಕಿರುಕುಳ ಜಾಸ್ತಿಯಾದ ಹಿನ್ನೆಲೆ ಕಳೆದ ಜ.16 ರಂದು ಮಹಿಳೆಯು ಉಳ್ಳಾಲ ಠಾಣೆಗೆ ದೂರು ನೀಡಿದ್ದು, ಆರೋಪಿಯ ವಿರುದ್ಧ ಅತ್ಯಾಚಾರ, ಪೋಕ್ಸೊ ಪ್ರಕರಣ ದಾಖಲಾಗಿತ್ತು. ಇದೀಗ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಉಳ್ಳಾಲ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Also Read  ಕೊಂಬಾರು: ಅಗ್ನಿವೀರ ಪುನೀತ್ ರಾಜ್ ಗೆ ಸನ್ಮಾನ

error: Content is protected !!
Scroll to Top