ಅಪ್ರಾಪ್ತ ಬಾಲಕಿಯನ್ನು ಅಪಹರಿಸಿದ ವೇಶ್ಯಾವಾಟಿಕೆ ದಂಧೆ ➤ ಸುಳ್ಯದ ಯುವಕ ಸೇರಿದಂತೆ ನಾಲ್ವರ ಬಂಧನ

(ನ್ಯೂಸ್ ಕಡಬ) newskadaba.com ಕಟಪಾಡಿ, ಜ. 22. ವೇಶ್ಯಾವಾಟಿಕೆಯ ಗುಂಪೊಂದು ಅಪ್ರಾಪ್ತ ಬಾಲಕಿಯನ್ನು ಬಲವಂತದಿಂದ ಕಾರಿನಲ್ಲಿ ಕರೆದೊಯ್ದು ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಪೋಸ್ಕೊ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

 

ಬಂಧಿತ ಆರೋಪಿಗಳನ್ನು ಮೂಲತಃ ಸುಳ್ಯ ತಾಲೂಕಿನ ಕರಿಕ್ಕಳ ಪಂಬೆತ್ಪಾಡಿ ನಿವಾಸಿ ಗುಲಾಬಿ ನಾಯ್ಕ್‌ (29), ಕುಂದಾಪುರ ಹೊಸೂರು ನಿವಾಸಿ ಮಂಜುನಾಥ (26), ಬ್ರಹ್ಮಾವರ ಕೀಳಿಂಜೆ ನಿವಾಸಿ ಶಶಿಧರ (42), ಉಡುಪಿ ತೆಂಕನಿಡಿಯೂರಿನ ರೋವೆಲ್‌ ಸೂರಜ್‌(47) ಎಂದು ಗುರುತಿಸಲಾಗಿದೆ. ಸಂತ್ರಸ್ತ ಬಾಲಕಿಯು ಸಹೋದರಿ ತಂಗಿ ಜತೆ ಮಂಗಳೂರಿನ ಬಾಡಿಗೆ ಕೋಣೆಯೊಂದರಲ್ಲಿ ವಾಸವಾಗಿದ್ದು, ತಾನು ವೇಶ್ಯಾವಾಟಿಕೆ ದಂಧೆ ಮಾಡಿಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾಳೆ. ಆಕೆಯನ್ನು ಆಗಾಗ ಉಡುಪಿ ಮಣಿಪಾಲದಲ್ಲಿ ದಂಧೆಗೆ ಬಳಸಿಕೊಳ್ಳುತ್ತಿದ್ದ ಗುಲಾಬಿ ನಾಯ್ಕ್‌ ಮತ್ತು ಸೂರಜ್‌ ಎಂಬವರು ಬುಧವಾರ ಒತ್ತಾಯದಿಂದ ಶಶಿ ಎಂಬವರೊಂದಿಗೆ ತೆರಳುವಂತೆ ಸೂಚಿಸಿದಾಗ ಈ ದಿನ ಬೇಡ ಎಂದು ನಿರಾಕರಿಸಿದ್ದರು. ಈ ಬಗ್ಗೆ ಇವರ ನಡುವೆ ಜಗಳ ನಡೆದು ಬಳಿಕ ಅವರೆಲ್ಲರೂ ಕಾಪುವಿನ ಬಾರೊಂದರಲ್ಲಿ ಒಟ್ಟಿಗೆ ಬಿಯರ್‌ ಕುಡಿಯುತ್ತಿದ್ದ ವೇಳೆ ದೂರುದಾರೆ ಅಕ್ಕನಿಗೆ ಫೋನ್‌ ಮಾಡಿದ್ದು, ಆ ವೇಳೆ ಫೋನ್‌ನಲ್ಲಿ ಗುಲಾಬಿ ಜತೆ ಜಗಳ ನಡೆದಿತ್ತು. ಸಿಟ್ಟುಗೊಂಡ ಗುಲಾಬಿ ಇತರ ಆರೋಪಿಗಳೊಂದಿಗೆ ಹಳೆಯಂಗಡಿಯ ದೂರುದಾರಳ ತಂಗಿಯನ್ನು ಬಲವಂತದಿಂದ ಕಾರಿನಲ್ಲಿ ಹಾಕಿ ಹಲ್ಲೆ ನಡೆಸಿ, ಲೈಂಗಿಕ ಕಿರುಕುಳ ನೀಡುತ್ತಾ ಉಡುಪಿಯತ್ತ ಹೋಗುತ್ತಿದ್ದಾಗ ರಾತ್ರಿ 9.30 ಗಂಟೆಗೆ ಕಟಪಾಡಿ ಬಳಿ ಅಪ್ರಾಪ್ತ ಯುವತಿ ರಕ್ಷಿಸುವಂತೆ ಜೋರಾಗಿ ಕೂಗಿಕೊಂಡಿದ್ದು, ಸಾರ್ವಜನಿಕರು ಆರೋಪಿಗಳನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.

Also Read  ಸವಣೂರು: ಸ್ನೇಹ ಸಮ್ಮಿಲನ, ಸ್ವಚ್ಚತಾ ಕಾರ್ಯಕ್ರಮ

error: Content is protected !!
Scroll to Top