ಮಂಗಳೂರು: ಬಿ-ಫಾರ್ಮಾ ವಿದ್ಯಾರ್ಥಿಗೆ ರಾಗಿಂಗ್ ➤ ಒಂಭತ್ತು ಮಂದಿಯ ಬಂಧನ

(ನ್ಯೂಸ್ ಕಡಬ) newskadaba.com ಮಂಗಳೂರು, ಜ.22. ಕೇರಳ ಮೂಲದ ವಿದ್ಯಾರ್ಥಿಗೆ ರ್ಯಾಗಿಂಗ್ ಮಾಡಿದ ಆರೋಪದಲ್ಲಿ ನಗರದ ಖಾಸಗಿ ಕಾಲೇಜಿನ ಒಂಭತ್ತು ಮಂದಿ ವಿದ್ಯಾರ್ಥಿಗಳನ್ನು ಮಂಗಳೂರು ಪೊಲೀಸರು ಶುಕ್ರವಾರದಂದು ಬಂಧಿಸಿದ್ದಾರೆ.

ಮೊದಲ ವರ್ಷದ ಬಿ-ಫಾರ್ಮಾ ವಿದ್ಯಾರ್ಥಿಗೆ ತಲೆಕೂದಲು ಮತ್ತು ಮೀಸೆ ತೆಗೆದು ಬರುವಂತೆ ಹಿರಿಯ ವಿದ್ಯಾರ್ಥಿಗಳು ಒತ್ತಡ ಹೇರಿದ್ದಲ್ಲದೆ, ಹಿರಿಯ ವಿದ್ಯಾರ್ಥಿಗಳ ಮಾತು ಕೇಳದ ಪ್ರಥಮ ವರ್ಷದ ವಿದ್ಯಾರ್ಥಿಗೆ ಹಲ್ಲೆ ನಡೆಸಲಾಗಿತ್ತು. ಈ ಬಗ್ಗೆ ವಿದ್ಯಾರ್ಥಿ ನೀಡಿದ ದೂರಿನಂತೆ ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸಿ ಕರ್ನಾಟಕ ಎಜುಕೇಶನ್ ಆ್ಯಕ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಬಲ್ಯ ಗ್ರಾಮದ ಹದಗೆಟ್ಟ ರಸ್ತೆಯ ದುಸ್ಥಿತಿ ➤ ಮತದಾನ ಬಹಿಷ್ಕರಿಸುವುದಾಗಿ ಬ್ಯಾನರ್ ಅಳವಡಿಕೆ

error: Content is protected !!
Scroll to Top